ETV Bharat / city

'ಕೈ' ಪಕ್ಷದ ಸಿದ್ದರಾಮಯ್ಯ-ಡಿಕೆಶಿ ಶೀತಲ ಸಮರಕ್ಕೆ ಬೀಳುತ್ತಿಲ್ಲ ಬ್ರೇಕ್‌! - ಬೆಂಗಳೂರು

ರಾಜ್ಯ ಕಾಂಗ್ರೆಸ್‌ನ ಅಗ್ರ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ನಡುವಿನ ಮುಸುಕಿನ ಗುದ್ದಾಟ ಆಗಾಗ ಬಹಿರಂಗವಾಗುತ್ತಲೇ ಇದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿನ ಬೆಳವಣಿಗೆಗಳು ಇದಕ್ಕೆ ಕಾರಣವಾಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಇದ್ದೇ ಇದೆ ಎನ್ನಲಾಗುತ್ತಿದೆ.

not stopping cold war between siddaramaiah, dk shivakumar
ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ-ಡಿಕೆಶಿ ಶೀತಲ ಸಮರಕ್ಕೆ ಬೀಳುತ್ತಿಲ್ಲ ಬ್ರೇಕ್‌!
author img

By

Published : Nov 18, 2021, 2:08 AM IST

Updated : Nov 18, 2021, 5:44 AM IST

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗುತ್ತಿದೆ, ನಾಯಕರೆಲ್ಲಾ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಂದುಕೊಳ್ಳುವ ಸಂದರ್ಭಕ್ಕೆ ಸರಿಯಾಗಿ ಏನಾದರೂ ಒಂದು ಅಚಾತುರ್ಯ ನಡೆಯುತ್ತದೆ. ಇದಕ್ಕೆ ಮೊನ್ನೆ ನಡೆದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭವೇ ಸಾಕ್ಷಿಯಾಗಿದೆ.

congress program
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕರು

ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಇದ್ದೇ ಇದೆ ಎನ್ನುವುದಕ್ಕೆ ಆಗಾಗ ಸಾಕ್ಷಿ ದೊರೆಯುತ್ತಿರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷವನ್ನು ಒಂದೆಡೆ ಸಂಘಟಿಸುತ್ತಿದ್ದರೆ ಇನ್ನೊಂದೆಡೆ ಸಿದ್ದರಾಮಯ್ಯ ತಮ್ಮದೇ ಆದ ತಂಡ ಕಟ್ಟಿಕೊಂಡು ಪ್ರತ್ಯೇಕವಾಗಿ ಕಾರ್ಯಯೋಜನೆ ರೂಪಿಸುತ್ತಿರುತ್ತಾರೆ. ಇನ್ನು ಉಳಿದ ನಾಯಕರದ್ದಂತೂ ಹೇಳುವುದೇ ಬೇಡ. ಒಟ್ಟಾರೆ ಕಾಂಗ್ರೆಸ್ ಪಕ್ಷದ ಚಟುವಟಿಕೆ ಮನೆಯೊಂದು ಹತ್ತಾರು ಬಾಗಿಲು ಅನ್ನುವಂತಾಗಿದೆ.

dks, abdul jabbar
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಅವರೊಂದಿಗೆ ಡಿಕೆ ಶಿವಕುಮಾರ್‌

ಸಿದ್ದರಾಮಯ್ಯ ಬಣ ಅವಕಾಶ ಸಿಕ್ಕಾಗೆಲ್ಲಾ ಪ್ರತಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನನ್ನು ಅಟ್ಟಕ್ಕೇರಿಸುವ ಕಾರ್ಯ ಮಾಡುತ್ತಾರೆ. ಇನ್ನೊಂದೆಡೆ ಪಕ್ಷದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕೊಂಡಾಡುವ ಕಾರ್ಯ ಆಗುತ್ತದೆ. ಇದೇ ರೀತಿ ಮೊನ್ನೆ ಕೂಡ ಆಗಿದ್ದು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ಸಿಳ್ಳೆ, ಚಪ್ಪಾಳೆ ಬಡಿದು ಸ್ವಾಗತಿಸಿದ್ದರು. ಭಾಷಣ ಮಾಡಲು ವೇದಿಕೆ ಏರಿದಾಗಲೂ ಅದೇ ಬೆಂಬಲ ಸಿಕ್ಕಿತ್ತು. ಆದರೆ ಕೆಲ ಕ್ಷಣ ಮಾತನಾಡಿ ಸಿದ್ದರಾಮಯ್ಯ ವೇದಿಕೆಯಿಂದ ಇಳಿದರು. ಕಾರಣ ಅವರಿಗೆ ಮಾತನಾಡುವ ಅವಕಾಶವನ್ನು ತಡೆಯಲಾಯಿತು.

ಡಿಕೆಶಿ ಅಭಿಮಾನಿಗಳು ಮಾಜಿ ಸಚಿವ ಜಮೀರ್ ಅಹ್ಮದ್‌ ಖಾನ್ ಭಾವಚಿತ್ರ ಹಿಡಿದು, ವೇದಿಕೆ ಬಳಿ ಜೈಕಾರ ಕೂಗಿದರು. ಇದರಿಂದ ಕಿರಿಕಿರಿಗೆ ಒಳಗಾದ ಸಿದ್ದರಾಮಯ್ಯ ವೇದಿಕೆಯಿಂದ ಕೆಳಗಿಳಿದರು. ಅವರಿಗೆ ವೇದಿಕೆ ಮೇಲೆ ಸೂಕ್ತ ಗೌರವವೂ ಪಕ್ಷದ ಕಡೆಯಿಂದ ಸಿಗಲಿಲ್ಲ ಎಂಬ ಆರೋಪವನ್ನು ಅವರ ಆಪ್ತರು ಹೇಳಿಕೊಂಡಿದ್ದಾರೆ. ಸಮಾರಂಭ ಮುಕ್ತಾಯವಾಗುವುದಕ್ಕೂ ಕಾಯದ ಸಿದ್ದರಾಮಯ್ಯ ಪಕ್ಕದಲ್ಲೇ ನಡೆಯುತ್ತಿದ್ದ ಪುನಿತ್ ರಾಜ್‌ಕುಮಾರ್‌ ನುಡಿನಮನ ಕಾರ್ಯಕ್ರಮದತ್ತ ತೆರಳಿದ್ದರು.

ಜಮೀರ್ ಕಡೆಗಣನೆ..?
ಪಕ್ಷದ ಕೆಲ ನಾಯಕರೇ ಹೇಳುವ ಪ್ರಕಾರ ಸಿದ್ದರಾಮಯ್ಯ ಹಾಗೂ ಅವರ ಬಣವನ್ನು ಮೂಲ ಕಾಂಗ್ರೆಸ್ ನಾಯಕರು ಸಹಿಸುತ್ತಿಲ್ಲ. ಇದರಿಂದಾಗಿಯೇ ಎಲ್ಲಿಯೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೆಸರು ಪ್ರಸ್ತಾಪವಾಗಿಲ್ಲ. ದಿಲ್ಲಿಯಲ್ಲಿದ್ದ ಜಮೀರ್ ಸಮಾರಂಭಕ್ಕೆ ಆಹ್ವಾನಿತರಾಗಿಲ್ಲ ಎಂಬ ಕಾರಣಕ್ಕೂ ಅವರ ಅಭಿಮಾನಿಗಳು ಭಾವಚಿತ್ರ ಹಿಡಿದು ವೇದಿಕೆ ಮುಂಭಾಗ ಘೋಷಣೆ ಕೂಗಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ ವಿಷಯ ಏನೇ ಇರಲಿ ಪಕ್ಷದ ಕಾರ್ಯಕ್ರಮದಲ್ಲಿ ಹಿಂದಿನಿಂದಲೂ ಸಿದ್ದರಾಮಯ್ಯಗೆ ಅವಮಾನ ಮಾಡುವ ಕಾರ್ಯ ಆಗುತ್ತಲೇ ಇದೆ.

siddu and jameer
ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಮೀರ್‌ ಅಹಮದ್‌ ಖಾನ್‌

ಕೆಲ ತಿಂಗಳ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭ ನಡೆಯಿತು. ಅಲ್ಲಿ ಸಾಕಷ್ಟು ದೊಡ್ಡ ದೊಡ್ಡ ಬ್ಯಾನರ್ ಅಳವಡಿಸಿ ಸ್ವಾಗತ ಕೋರಲಾಗಿತ್ತು. ಆದರೆ ಬಹುತೇಕ ಬ್ಯಾನರ್‌ಗಳಲ್ಲಿ ಸಿದ್ದರಾಮಯ್ಯ ಚಿತ್ರವೇ ಇರಲಿಲ್ಲ. ಇದು ಒಂದೆರಡು ಸಾರಿ ನಡೆದದ್ದಲ್ಲ, ಸಾಕಷ್ಟು ಸಾರಿ ನಡೆದಿದೆ. ಆದ್ದರಿಂದ ಬಹುತೇಕ ನಾಯಕರಿಗೆ ಇದರ ಅರಿವು ಸಹ ಇದೆ.

ಸಮಜಾಯಿಷಿ ನೀಡಿದ ನಾಯಕರು
ಆದರೆ ಕಡೆಗಣನೆ ವಿಚಾರವನ್ನು ಸಿದ್ದರಾಮಯ್ಯ ಆಗಲಿ ಡಿ.ಕೆ. ಶಿವಕುಮಾರ್ ಆಗಲಿ, ತಮ್ಮದೇ ಆದ ರೀತಿಯಲ್ಲಿ ತಿರಸ್ಕರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಇದು ನಡೆದಿಲ್ಲ ಎಂದಿದ್ದಾರೆ. ಈಗಲೂ ಇಬ್ಬರೂ ನಾಯಕರ ವಿರುದ್ಧ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ತಮ್ಮ ತಮ್ಮ ಅವಕಾಶ ಬಂದಾಗ ಅದನ್ನವರು ವ್ಯಕ್ತಪಡಿಸುತ್ತಿದ್ದಾರೆ.

ಆಪ್ತರಿಗೆ ಸಿಗುತ್ತಾ ಪರಿಷತ್ ಟಿಕೆಟ್‌?

ವಿಧಾನ ಪರಿಷತ್ 25 ಸ್ಥಾನಗಳಿಗೆ ಇದೇ ಡಿ.10ಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ 13 ಮಂದಿ ಸ್ಥಾನ ತೆರವಾಗುತ್ತಿದೆ. ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದ್ದರೂ, ಸಿದ್ದರಾಮಯ್ಯ ಆಪ್ತರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದರಿಂದಲೇ ವಿಧಾನ ಪರಿಷತ್ ಕಾಂಗ್ರೆಸ್ ವಿಪ್ ಎಂ. ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಪರ್ಧಿಸುವುದಾಗಿ ತಿಳಿಸಿ, ನಂತರ ಟಿಕೆಟ್ ಘೋಷಣೆ ಆಗದಿದ್ದರೆ ಅವಮಾನ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ತಮ್ಮವರನ್ನು ತುಂಬಲು ಇಬ್ಬರೂ ನಾಯಕರು ಯತ್ನಿಸಲಿದ್ದಾರೆ. ವಿಧಾನಸಭೆ ಚುನಾವಣೆ ವೇಳೆಗೆ ಈ ಆಂತರಿಕ ಕಿತ್ತಾಟಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ.

Last Updated : Nov 18, 2021, 5:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.