ETV Bharat / city

ಅರಣ್ಯ ಪ್ರದೇಶದಿಂದ ಯಾವ ರೈತರನ್ನೂ ಒಕ್ಕಲೆಬ್ಬಿಸಬಾರದು: ಸಿಎಂ ಸೂಚನೆ - ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರ ಇನಾಮ್ ಭೂಮಿ

ಅರಣ್ಯದಿಂದ ಯಾವ ರೈತರನ್ನೂ ಕೂಡಾ ಒಕ್ಕಲೆಬ್ಬಿಸಬಾರದು. ಅವರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅರಣ್ಯ ಪ್ರದೇಶದಿಂದ ಯಾವ ರೈತರನ್ನೂ ಒಕ್ಕಲೆಬ್ಬಿಸಬಾರದು: ಸಿಎಂ ಸೂಚನೆ
author img

By

Published : Oct 31, 2019, 11:49 PM IST

ಬೆಂಗಳೂರು: ಅರಣ್ಯದಿಂದ ಯಾವ ರೈತರನ್ನು ಒಕ್ಕಲೆಬ್ಬಿಸಬಾರದು. ಅವರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರ ಇನಾಮ್ ಭೂಮಿ ಸಾರಗೋಡು ತತ್ಕೋಳ ಮತ್ತು ಮಸಗಲಿ ಮೀಸಲು ಅರಣ್ಯ ಒತ್ತುವರಿ ತೆರವು ಕುರಿತು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಿಎಂ, ರೈತರ ಹಿತಾಸಕ್ತಿ ಕಾಪಾಡಬೇಕು. ಇವತ್ತು ಅರಣ್ಯ ಉಳಿದಿದೆ ಅಂದರೆ ಅದಕ್ಕೆ ರೈತರು ಕಾರಣ. ನ್ಯಾಯಾಲಯಕ್ಕೆ ಈ ಬಗ್ಗೆ ಕೂಡಲೇ ಅಫಿಡವಿಟ್ ಹಾಕಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇರಳ‌ ಮಾದರಿಯಲ್ಲಿ ನಾವು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಹಾಕಿ ರೈತರ ಜಮೀನು ಉಳಿಸಕೊಳ್ಳಬಹುದು ಅಂತ ಹೇಳಿದರು. ಅಫಿಡವಿಟ್ ಹಾಕದೆ ಹೋದರೆ ಇಡೀ ಊರಿಗೆ ಊರೇ ಶಿಫ್ಟ್ ಮಾಡಬೇಕಾಗುತ್ತದೆ. ಅದಕ್ಕೆ ಪರ್ಯಾಯ ಜಾಗ ಹುಡುಕುವುದು ಸಹ ಕಷ್ಟ ಮತ್ತು ಶಿಫ್ಟ್ ಮಾಡುವುದು ಸಹ ಕಷ್ಟವಾಗುತ್ತದೆ ಅಂತ ಮನವರಿಕೆ ಮಾಡಿಕೊಟ್ಟರು.

Intro:Body:KN_BNG_05_CMMEETING_RESERVEFOREST_SCRIPT_7201951

ಅರಣ್ಯ ಪ್ರದೇಶದಿಂದ ಯಾವ ರೈತರನ್ನೂ ಒಕ್ಕಲೆಬ್ಬಿಸಬಾರದು: ಸಿಎಂ ಸೂಚನೆ

ಬೆಂಗಳೂರು: ಯಾವ ರೈತರನ್ನು ಒಕ್ಕಲೆಬ್ಬಿಸಬಾರದು. ಅವರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರ ಇನಾಮ್ ಭೂಮಿ ಸಾರಗೋಡು ತತ್ಕೋಳ ಮತ್ತು ಮಸಗಲಿ ಮೀಸಲು ಅರಣ್ಯ ಒತ್ತುವರಿ ತೆರವು ಕುರಿತು ನಡೆದ ಸಭೆಯಲ್ಲಿ ಸಿಎಂ, ರೈತರ ಹಿತಾಸಕ್ತಿ ಕಾಪಾಡಬೇಕು. ಇವತ್ತು ಅರಣ್ಯ ಉಳಿದಿದೆ ಅಂದರೆ ಅದಕ್ಕೆ ರೈತರು ಕಾರಣ. ನ್ಯಾಯಾಲಯಕ್ಕೆ ಈ ಬಗ್ಗೆ ಕೂಡಲೇ ಅಫಿಡವಿಟ್ ಹಾಕಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾನ್ಯ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ ಕೇರಳ‌ ಮಾದರಿಯಲ್ಲಿ ನಾವು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಹಾಕಿ ರೈತರ ಜಮೀನು ಉಳಿಸಕೊಳ್ಳಬಹುದು ಅಂತ ಹೇಳಿದರು. ಅಫಿಡವಿಟ್ ಹಾಕದೇ ಹೋದರೆ ಇಡೀ ಊರಿಗೆ ಊರೇ ಶಿಫ್ಟ್ ಮಾಡಬೇಕಾಗುತ್ತದೆ. ಅದಕ್ಕೆ ಪರ್ಯಾಯ ಜಾಗ ಹುಡುಕುವುದು ಸಹ ಕಷ್ಟ ಮತ್ತು ಶಿಫ್ಟ್ ಮಾಡುವುದು ಸಹ ಕಷ್ಟವಾಗುತ್ತದೆ ಅಂತ ಮನವರಿಕೆ ಮಾಡಿಕೊಟ್ಟರು.

ಅರಣ್ಯಾಧಿಕಾರಿಗಳು ರೈತರ ವಿರುದ್ಧ ದೂರು ದಾಖಲಿಸಿ ಬೆಂಗಳೂರಿಗೆ ಓಡಾಡಿಸುತ್ತಿದ್ದಾರೆ ಅಂತ ಕೆಲ ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ‌ನೀಡಿದ ಸಿಎಂ ರೈತರ ವಿರುದ್ಧ ದೂರು ದಾಖಲಿಸದಂತೆ ತಾಕೀತು ಮಾಡಿದರು. ರಾಜ್ಯದ ರೈತರ ಹಿತದೃಷ್ಟಿಯಿಂದ ರೈತರ ಜಮೀನಿಗೆ ತೊಂದರೆ ಕೊಡಬಾರದು. ಸುಪ್ರೀಂ ಕೋರ್ಟ್ ಗೆ ಸರ್ಕಾರನೇ ಮಾಹಿತಿ‌ ನೀಡಬೇಕು ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.