ETV Bharat / city

Night Curfew: ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ, ಏನೆಲ್ಲಾ ನಿರ್ಬಂಧಗಳು? - ಕರ್ನಾಟಕದಲ್ಲಿ ಕೋವಿಡ್ ಮಾರ್ಗಸೂಚಿ

ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿಯಾಗಲಿದೆ. ಜೊತೆಗೆ, ಹಲವು ಮಾರ್ಗಸೂಚಿಗಳು ಕೂಡ ಇಂದಿನಿಂದ ಅನ್ವಯವಾಗಲಿವೆ.

Night Curfew in Karnataka,ಕರ್ನಾಟಕದಲ್ಲಿ ನೈಟ್ ಕರ್ಫ್ಯೂ
Night Curfew in Karnataka
author img

By

Published : Dec 28, 2021, 7:53 AM IST

Updated : Dec 28, 2021, 8:09 PM IST

ಬೆಂಗಳೂರು: ಹೊಸ ವರ್ಷದ ಸಂಭ್ರಮ ಒಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ನೈಟ್ ಕರ್ಫ್ಯೂ ಆದೇಶ ಇಂದಿನಿಂದ (ಡಿ.28) ಜಾರಿಗೆ ಬರಲಿದ್ದು, ಜ.7 ರ ವರೆಗೆ ಮುಂದುವರಿಯಲಿದೆ.

ಕರ್ಫ್ಯೂ ಜೊತೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.

ಸರ್ಕಾರದ ನಿಯಮಾನುಸಾರ 144 ಸೆಕ್ಷನ್ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಯಾವುದಕ್ಕೆ ನಿರ್ಬಂಧ? ನಿರ್ಬಂಧವಿಲ್ಲ?:

  • ನೈಟ್ ಕರ್ಫ್ಯೂ ವೇಳೆ ಅನಾರೋಗ್ಯ ಸಮಸ್ಯೆವುಳ್ಳವರು, ರೋಗಿಗಳು ಮತ್ತು ಅವರ ಪರಿಚಾರಕರು/ವ್ಯಕ್ತಿಗಳ ಓಡಾಟಕ್ಕೆ ತುರ್ತು ಅಗತ್ಯ ಸಂಚಾರಕ್ಕೆ ಅವಕಾಶ.
  • ರಾತ್ರಿಯಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ಕಂಪನಿಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಬಹುದು.
  • ಅಂತಹ ಸಂಸ್ಥೆಗಳ ಉದ್ಯೋಗಿಗಳು ಸಂಬಂಧಿತ ಸಂಸ್ಥೆ/ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿ ತೋರಿಸಿ ಸಂಚಾರ ಮಾಡಬಹುದು.
  • ಟೆಲಿಕಾಂ ಮತ್ತು ಇಂಟರ್​​ನೆೆಟ್ ಸೇವಾ ಪೂರೈಕೆದಾರರ ಉದ್ಯೋಗಿಗಳು ಮತ್ತು ವಾಹನಗಳು ತಮ್ಮ ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿಯನ್ನು ತೋರಿಸಬಹುದು.
  • IT ಮತ್ತು ITeS ಕಂಪನಿಗಳ ಉದ್ಯೋಗಿಗಳು ಆದಷ್ಟು ವರ್ಕ್ ಫ್ರಂ ಹೋಂ ಇದ್ದು, ಅಗತ್ಯ ಇದ್ದವರಷ್ಟೇ ಕಚೇರಿಗೆ ತೆರಳಬಹುದು.
  • ಮೆಡಿಕಲ್​​ ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
  • ಎಲ್ಲಾ ರೀತಿಯ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಟ್ರಕ್‌ಗಳು, ಸರಕು ವಾಹನಗಳು ಅಥವಾ ಖಾಲಿ ಸೇರಿದಂತೆ ಯಾವುದೇ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ಇದೆ.‌
  • ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್‌ನ ಕಂಪನಿಗಳನ್ನು ಅನುಮತಿಸಲಾಗಿದೆ.
  • ಬಸ್​​ಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನ ಪ್ರಯಾಣಕ್ಕೂ ಅನುಮತಿಸಲಾಗಿದೆ.
  • ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟ ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು/ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಇತ್ಯಾದಿಗಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ.‌
  • ಆದರೆ ಪ್ರಯಾಣಿಕರು ಪ್ರಯಾಣ ದಾಖಲೆಗಳು/ಟಿಕೆಟ್‌ಗಳನ್ನು ಪ್ರದರ್ಶಿಸಿದರೆ ಮಾತ್ರ ಅವಕಾಶ ಇದೆ.
  • ಡಿ. 30 ರಿಂದ ಜ.2 ರವರೆಗೆ ರೆಸ್ಟೋರೆಂಟ್‌ಗಳು/ಹೋಟೆಲ್‌ಗಳು/ಕ್ಲಬ್‌ಗಳು/ಪಬ್‌ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ವ್ಯವಸ್ಥೆ ಮಾಡಬೇಕು. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್​​-19 ನೆಗಟಿವ್ ರಿಪೋರ್ಟ್ ಹೊಂದಿರಬೇಕು ಮತ್ತು 2 ಡೋಸ್‌ ಲಸಿಕೆ ಪಡೆದಿರಬೇಕು.
  • ಡಿ. 28 ರಿಂದ ಎಲ್ಲಾ ಸಭೆಗಳು, ಸಮ್ಮೇಳನಗಳು, ಮದುವೆಗಳು ಸೇರಿದಂತೆ ಭಾಗವಹಿಸುವವರ ಸಂಖ್ಯೆಯನ್ನು 300 ಜನರಿಗೆ ಮಾತ್ರ ಸೀಮಿತಗೊಳಿಸಬೇಕು.
  • ರಾಜ್ಯದಲ್ಲಿ ಕೋವಿಡ್ 19, ವಿಶೇಷವಾಗಿ ಒಮಿಕ್ರಾನ್ ರೂಪಾಂತರ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವ ಎಲ್ಲಾ ಗಡಿ ಜಿಲ್ಲೆಗಳಲ್ಲಿ ತೀವ್ರ ಗಸ್ತು ಮತ್ತು ಕಣ್ಗಾವಲಿಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ 2 ತಿಂಗಳ ಮಗುವಿಗೆ ಮುಂಬೈನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ.. ದೇಶದಲ್ಲಿ ಮೊದಲ,ವಿಶ್ವದಲ್ಲೇ 2ನೇ ಪ್ರಕರಣ

Last Updated : Dec 28, 2021, 8:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.