ಬೆಂಗಳೂರು : ಸದ್ಯ ಅನ್ಲಾಕ್ 3.0ದಿಂದಾಗಿ ರಾತ್ರಿ ಕರ್ಫ್ಯೂ ಹಾಗೂ ಭಾನುವಾರದ ಲಾಕ್‌ಡೌನ್ ತೆರವು ಮಾಡಲಾಗಿದೆ. ಇದರಿಂದ ಪೊಲೀಸರು ಕೊಂಚ ನಿರಾಳರಾಗಿದ್ದಾರೆ.
ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಕೊರೊನಾ ಸೋಂಕು ಒಂದೆಡೆ ವ್ಯಾಪಕವಾಗಿ ಪತ್ತೆಯಾಗಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಅನ್ಲಾಕ್ ರಿಲೀಫ್ನಿಂದಾಗಿ ಪೊಲೀಸರು ಕೊಂಚ ನಿರಾಳರಾಗಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಸಿಬ್ಬಂದಿ ಕೊರತೆಯ ನಡುವೆ ಪೊಲೀಸರು ರಾತ್ರಿ ಗಸ್ತು ಹಾಗೂ ಭಾನುವಾರ ಪ್ರಮುಖ ರಸ್ತೆಗಳ ಬಳಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಿನಾಕಾರಣ ಓಡಾಟ ಮಾಡುವ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರು. ಒಂದು ವೇಳೆ ಸುಖಾ ಸುಮ್ಮನೆ ಓಡಾಡುವ ವಾಹನಗಳನ್ನು ಜಪ್ತಿ ಮಾಡುತ್ತಿದ್ದರು. ಸದ್ಯ ಯಾವುದೇ ರೀತಿಯ ಲಾಕ್‌ಡೌನ್ ಇಲ್ಲದ ಕಾರಣ ಕೊಂಚ ರಿಲೀಫ್ ಆಗಿದ್ದಾರೆ.
ಸದ್ಯ ಮಾಸ್ಕ್ ಹಾಕದವರ ಮೇಲೆ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ಮೇಲೆ ಫೈನ್ ಹಾಕುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ. ಕೊರೊನಾಗೋಸ್ಕರ ಲಾಕ್‌ಡೌನ್ ಹೇರಿದ್ದು, ಸದ್ಯ ರಿಲೀಫ್ ಆದ ಕಾರಣ ಪೊಲೀಸರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.