ನೆಲಮಂಗಲ : ತಾಲೂಕು ಆಡಳಿತ ವತಿಯಿಂದ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಸ್ಲೀಮರು ಭಾಗಿಯಾಗಿ ಗಮನ ಸೆಳೆದರು.
ಶಾಸಕ ಶ್ರೀನಿವಾಸ್ ಮೂರ್ತಿ ಹಾಗೂ ತಹಶೀಲ್ದಾರ್ ಶ್ರೀನಿವಾಸಯ್ಯ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ತಾಯಿ ಭುವನೇಶ್ವರಿಯ ಮೆರವಣಿಗೆ ಮಾಡಲಾಯಿತು. ಈ ವೇಳೆ ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ನಂತರ ನೆಲಮಂಗಲ ತಾಲೂಕು ಕಚೇರಿಯಲ್ಲಿ ಶಾಸಕರಿಂದ ದ್ವಜಾರೋಹಣ ನಡೆಯಿತು.
ವಿಶೇಷ ಅಂದ್ರೆ, ನೆಲ, ಜಲ, ಭಾಷೆ, ಧರ್ಮದ ಭೇದಭಾವವಿಲ್ಲದೆ ಮದೀನಾ ಮಸೀದಿಯ ಅವರಣದಲ್ಲಿ ಮುಸ್ಲೀಮರು ರಾಜ್ಯೋತ್ಸವ ಆಚರಿಸಿದರು. ಪುರಸಭಾ ಸದಸ್ಯರಾದ ಗಂಗಾಧರ್ ರಾವ್ ಗಣಿ ಮತ್ತು ಸುನಿಲ್ ಮೂಡ್ ಅವರಿಂದ ಧ್ವಜಾರೋಹಣ ನಡೆಯಿತು. ನಂತರ ಮದೀನಾ ಮಸೀದಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ವೇಳೆ ಅಮ್ಜದ್ ಖಾನ್, ಗುಲ್ ಷನ್ ಬಾಬುಜನ್, ಅನ್ಸರ್ ಪಾಷ ,ಇಂತಿಯಾಜ್, ಅಜಿಜ್ ರಶೀದ್ ಬಾಯ್ ರಕೀಬ್ ಹಾಜರಿದ್ದರು.