ETV Bharat / city

4.61 ಲಕ್ಷ ರೈತರಿಗೆ 318.87 ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆ : ಸಚಿವ ಆರ್. ಅಶೋಕ್ ಮಾಹಿತಿ - Minister R Ashok speaks about Crop damage

ಎನ್​ಡಿಆರ್​ಎಫ್​ ನಿಯಮದಡಿಯಲ್ಲಿ ಕೇಂದ್ರಕ್ಕೆ ವರದಿ ಕೊಡಲಾಗುವುದು. ಒಟ್ಟಾರೆ ನಷ್ಟ, ರಸ್ತೆ, ವಿದ್ಯುತ್​ ಕಂಬ ಸೇರಿದಂತೆ ಹಲವು ಹಾನಿ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಖಾತೆಗಳ ಮೂಲಕ ಹಣ ನೀಡುವಂತೆ ಸೂಚನೆ ನೀಡಲಾಗಿದೆ. ಪಿಡಿ ಖಾತೆಯಲ್ಲಿ 600 ಕೋಟಿ ರೂ. ಹಣ ಇದೆ. ಯಾವುದೇ ಹಣದ ಕೊರತೆ ಇಲ್ಲ..

minister r ashok
ಸಚಿವ ಆರ್. ಅಶೋಕ್ ಮಾಹಿತಿ
author img

By

Published : Nov 30, 2021, 4:45 PM IST

ಬೆಂಗಳೂರು : ನೆರೆಗೆ ಬೆಳೆ ಹಾನಿಯಾದ 4.61 ಲಕ್ಷ ರೈತರಿಗೆ 318.87 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈವರೆಗೂ 3 ಲಕ್ಷ ರೈತರಿಗೆ 276.57 ಕೋಟಿ ರೂ. ಪರಿಹಾರ ನೇರವಾಗಿ ಪಾವತಿ ಮಾಡಲಾಗಿದೆ.

ಇಂದು 1.61 ಲಕ್ಷ ರೈತರಿಗೆ ಇನ್‌ಪುಟ್ ಸಬ್ಸಿಡಿ ಸೇರಿಸಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಆ ಮೂಲಕ 4.61 ಲಕ್ಷ ರೈತರಿಗೆ 318.87 ಕೋಟಿ ಸಬ್ಸಿಡಿ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಿದಂತಾಗಲಿದೆ. ಇದೇ ಮೊದಲ ಬಾರಿಗೆ ಬೆಳೆ ಹಾನಿ ವರದಿ ಬಂದ ತಕ್ಷಣ ಹಣ ಸಂದಾಯ ಮಾಡಲಾಗಿದೆ ಎಂದರು.

ಎನ್​ಡಿಆರ್​ಎಫ್​ ನಿಯಮದಡಿಯಲ್ಲಿ ಕೇಂದ್ರಕ್ಕೆ ವರದಿ ಕೊಡಲಾಗುವುದು. ಒಟ್ಟಾರೆ ನಷ್ಟ, ರಸ್ತೆ, ವಿದ್ಯುತ್​ ಕಂಬ ಸೇರಿದಂತೆ ಹಲವು ಹಾನಿ ಬಗ್ಗೆ ಅಂದಾಜು ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಖಾತೆಗಳ ಮೂಲಕ ಹಣ ನೀಡುವಂತೆ ಸೂಚನೆ ನೀಡಲಾಗಿದೆ. ಪಿಡಿ ಖಾತೆಯಲ್ಲಿ 600 ಕೋಟಿ ರೂ. ಹಣ ಇದೆ. ಯಾವುದೇ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಸದ್ಯ ಯಾವುದೇ ಲಾಕ್‌ಡೌನ್ ಇಲ್ಲ : ಕೋವಿಡ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಮೈಸೂರು, ಚಾಮರಾಜನಗರ ಗಡಿಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಪ್ರಸ್ತಾಪ ಇಲ್ಲ. ಯಾರೂ ಆತಂಕ ಪಡುವುದು ಬೇಡ ಎಂದರು.

ಇದನ್ನೂ ಓದಿ: MeToo ಕೇಸ್​ನಲ್ಲಿ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್​.. ಸಾಕ್ಷ್ಯಾಧಾರ ಕೊರತೆಯಿಂದ ಬಿ ರಿಪೋರ್ಟ್​ ಸಲ್ಲಿಕೆ..

ದಕ್ಷಿಣ ಆಫ್ರಿಕಾ ಸೇರಿದಂತೆ ಹಲವೆಡೆ ಒಮಿಕ್ರಾನ್ ವೈರಸ್ ಕಾಣಿಸಿದೆ. ಹೀಗಾಗಿ, ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳು ಗಡಿಯಲ್ಲಿ ತಪಾಸಣೆಗೆ ಸೂಚನೆ ನೀಡಿದ್ದಾರೆ ಎಂದರು.

ಯಾರೂ ತಿರುಕನ ಕನಸು ಕಾಣೋದು ಬೇಡ : ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ ಅಂತಾ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ತಿರುಕನ ಕನಸು ಕಾಣೋದು ಬೇಡ ಎಂದು ಟಾಂಗ್ ನೀಡಿದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ತೀರ್ಮಾನದಂತೆ ಬೊಮ್ಮಾಯಿ ಸಿಎಂ‌ ಆಗಿ ಆಯ್ಕೆಯಾಗಿದ್ದಾರೆ. ಇದನ್ನು ನಮ್ಮ ವರಿಷ್ಠರೇ ಸ್ಪಷ್ಟವಾಗಿ ಹೇಳಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ಜನರ ಧ್ವನಿಯಾಗಬೇಕು ಅಷ್ಟೇ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.