ETV Bharat / city

ಕಾಂಗ್ರೆಸ್​ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ : ಸಚಿವ ಆರ್​. ಅಶೋಕ್​ ವ್ಯಂಗ್ಯ

author img

By

Published : Jan 28, 2022, 5:35 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಲೀಡರ್​ ಅಲ್ಲ, ಸಿದ್ದರಾಮಯ್ಯ ಲೀಡರ್ ಎಂದು ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಈಗ ಅವರೇ ನನಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ನಿಂದ ಪಕ್ಷಾಂತರ ಪರ್ವ ಶುರುವಾಗುತ್ತದೆ ಎಂಬ ನಮ್ಮ ಹೇಳಿಕೆ ಸತ್ಯವಾಗಿದೆ..

minister-r-ashok
ಸಚಿವ ಆರ್​. ಅಶೋಕ್

ಬೆಂಗಳೂರು: ಇದು ಬರೀ ಸ್ಯಾಂಪಲ್ ಅಷ್ಟೇ, ಮುಂದೆ ಸಿನಿಮಾ ಬಾಕಿ ಇದೆ ಎಂದು ಹೇಳುವ ಮೂಲಕ ಸಚಿವ ಆರ್.ಅಶೋಕ್ ಕಾಂಗ್ರೆಸ್ ಪಕ್ಷಾಂತರ ಪರ್ವ ಇನ್ನೂ ಇದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಸಂಪರ್ಕದಲ್ಲಿ 20 ಜನ ಬಿಜೆಪಿಗರು ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಡಿ.ಕೆ.ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸಂಪರ್ಕದಲ್ಲಿ ಮಂತ್ರಿಗಳಿದ್ದಾರೆ ಎಂದಿದ್ರು.

ಈಗ ಕಾಂಗ್ರೆಸ್​ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅವರೇ ಪಕ್ಷ ತೊರೆಯಲು ಮುಂದಾಗಿದ್ದು, ಪಕ್ಷದ ದಿಡ್ಡಿ ಬಾಗಿಲೆ ಕಿತ್ತುಕೊಂಡು ಹೋಗಿದೆ ಎಂದು ಆರ್​. ಅಶೋಕ್​ ವ್ಯಂಗ್ಯವಾಡಿದರು.

ಇದನ್ನೂ ಓದಿ: ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹ.. ಡಾಕ್ಟರ್​ ವಿರುದ್ಧ ಕೇಸ್​ ದಾಖಲು..

ಕಾಂಗ್ರೆಸ್​ ಪಾರ್ಟಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಲೀಡರ್​ ಅಲ್ಲ, ಸಿದ್ದರಾಮಯ್ಯ ಲೀಡರ್ ಎಂದು ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಈಗ ಅವರೇ ನನಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ನಿಂದ ಪಕ್ಷಾಂತರ ಪರ್ವ ಶುರುವಾಗುತ್ತದೆ ಎಂಬ ನಮ್ಮ ಹೇಳಿಕೆ ಸತ್ಯವಾಗಿದೆ ಎಂದರು.

ಕಾಂಗ್ರೆಸ್​ನ ಮೊದಲ ವಿಕೆಟ್ ಪತನವಾಗಿದೆ. ಇನ್ನೂ 10 ರಿಂದ 15 ಜನ ಬಿಡ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗುವ ಪರಿಸ್ಥಿತಿ ಕಾಣ್ತಾ ಇದೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆದ್ರೆ, ಅವರು ಬೇರೆ ಕಡೆ ಕಾಲು ಇಟ್ಟಿದ್ದಾರೆ. ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ. ಇದು ಪ್ರಾರಂಭ ಅಷ್ಟೇ.. ಇನ್ನು ಸಿನಿಮಾ ಬಾಕಿ ಇದೆ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.