ETV Bharat / city

ಸಚಿವ ಆನಂದ್ ಸಿಂಗ್ ಖಾತೆ ಒಪ್ಪಿಕೊಂಡರೆ? :ಸಚಿವರ ಕೊಠಡಿಗೆ ಆನಂದ್ ಸಿಂಗ್ ಖಾತೆ ನಾಮಫಲಕ ಅಳವಡಿಕೆ - ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್

ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್ ಕೊಠಡಿಗೆ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಬೋರ್ಡ್​​ ಅನ್ನು ಅಳವಡಿಸಲಾಗಿದೆ. ಇದರಿಂದ ಅವರು ಆ ಖಾತೆಗಳನ್ನೇ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

minister-anand-singh-latest-news
ಸಚಿವ ಆನಂದ್ ಸಿಂಗ್ ಖಾತೆ ಒಪ್ಪಿಕೊಂಡರೆ? :ಸಚಿವರ ಕೊಠಡಿಗೆ ಆನಂದ್ ಸಿಂಗ್ ಖಾತೆ ನಾಮಫಲಕ ಅಳವಡಿಕೆ
author img

By

Published : Aug 18, 2021, 1:15 AM IST

ಬೆಂಗಳೂರು : ಖಾತೆ ವಿಚಾರದಲ್ಲಿ ಸಚಿವ ಆನಂದ್ ಸಿಂಗ್ ಅವರ ಅಸಮಾಧಾನದ ಬ್ರೇಕ್ ಬಿದ್ದಿದೆಯೇ?, ಇದಕ್ಕೆ ಪುಷ್ಠಿ ನೀಡುವಂತೆ ಮಂಗಳವಾರ ಬೆಳವಣಿಗೆಯೊಂದು ನಡೆದಿದೆ.

ವಿಕಾಸಸೌಧದಲ್ಲಿ ಕೊಠಡಿ ಸಂಖ್ಯೆ 36 ಮತ್ತು 37 ಅನ್ನು ಆನಂದ್​ ಸಿಂಗ್ ಅವರಿಗೆ ನಿಗದಿಪಡಿಸಲಾಗಿತ್ತು. ಆದರೆ, ಇದುವರೆಗೂ ಅವರು ಕೊಠಡಿ ಪ್ರವೇಶ ಮಾಡಲಿಲ್ಲ. ವಿಧಾನಸೌಧಕ್ಕೂ ಕಾಲಿಡಲಿಲ್ಲ. ಆದರೆ, ಮಂಗಳವಾರ ಅವರ ಕೊಠಡಿ ಹೊರಗೆ ಆನಂದ್ ಸಿಂಗ್ ನಾಮಫಲಕ ಹಾಕಲಾಗಿದೆ. ಹಾಗಾಗಿ, ಅಸಮಾಧಾನಕ್ಕೆ ಆನಂದ್ ಸಿಂಗ್ ತೆರೆ ಎಳೆದಿದ್ದಾರೆ ಎನ್ನಲಾಗುತ್ತಿದೆ.

ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್ ಕೊಠಡಿಗೆ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಬೋರ್ಡ್​​ ಅನ್ನು ಅಳವಡಿಸಲಾಗಿದೆ. ಇದರಿಂದ ಅವರು ಆ ಖಾತೆಗಳನ್ನೇ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಆನಂದ್‌ ಸಿಂಗ್‌ ಅವರ ಖಾತೆಯನ್ನೇ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಬದಲಾವಣೆ ಮಾಡಲಾಗಿತ್ತು. ಈಗ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಮಹತ್ವವಲ್ಲದ ಖಾತೆಗೆ ಸೀಮಿತಗೊಳಿಸಿದ್ದರಿಂದ ಸಚಿವ ಆನಂದ್‌ ಸಿಂಗ್‌ ಅವರಿಗೆ ಸಹಜವಾಗಿ ಬೇಸರ ತರಿಸಿತ್ತು. ವಿಜಯನಗರ ಶಾಸಕರ ಕಚೇರಿಯನ್ನು ಸಹ ಆನಂದ್ ಸಿಂಗ್ ಖಾಲಿ ಮಾಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಈ ಮಧ್ಯೆ ಖಾತೆ ಬದಲಾವಣೆಯಿಂದ ಸಚಿವರು ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಬಳ್ಳಾರಿಯಲ್ಲಿ ಖಾತೆ ಹಂಚಿಕೆ ಬಗ್ಗೆ ಮಾತನಾಡುವ ವೇಳೆ ಅವರು, ಪ್ರವಾಸೋದ್ಯಮ ನನಗೆ ಬೇಡ. ಬೇರೆ ಖಾತೆ ಕೊಡಿ. ಇಲ್ಲ ಅಂದರೆ ಶಾಸಕನಾಗಿಯೇ ಉಳಿಯುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನವೂ ಬೇಡ ಎಂದಿದ್ದರು.

ಇದೇ ವೇಳೆ ಸಚಿವ ಸ್ಥಾನಕ್ಕೆ ಆನಂದ್‌ ಸಿಂಗ್‌ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಳಿಕ ಸಚಿವ ಆನಂದ್‌ ಸಿಂಗ್‌ ಅವರೇ ಸ್ವತಃ ಅಸಮಾಧಾನ ಇಲ್ಲ. ರಾಜೀನಾಮೆ ನೀಡುವ ಮಾತೇ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಟೆಕ್ಸ್‌ಟೈಲ್‌ ಅಂಗಡಿ ಮಾಲೀಕನ ಗುಂಡಿಟ್ಟು ಹತ್ಯೆ: ಪ್ರತೀಕಾರದ ಕೊಲೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.