ಬೆಂಗಳೂರು: ಆಗಸ್ಟ್ 14ರಂದು ರಾಜ್ಯಾದ್ಯಂತ ನಡೆದ ಮೆಗಾ ಲೋಕ ಅದಾಲತ್ ನಲ್ಲಿ 3.88 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾಹಿತಿ ನೀಡಿದರು.
ಲೋಕ ಅದಾಲತ್‌ನಲ್ಲಿ 79,207 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 5,32,326 ಪ್ರಕರಣಗಳು ಸೇರಿ ಒಟ್ಟು 6,11,533 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.
ರಾಜ್ಯಾದ್ಯಂತ 943 ಪೀಠಗಳು ಅದಾಲಾತ್ ನಡೆಸಿ 33,251 ವ್ಯಾಜ್ಯಪೂರ್ವ ಹಾಗೂ 3,55,730 ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳು ಸೇರಿ ಒಟ್ಟು 3,88,981 ಪ್ರಕರಣಗಳನ್ನು ರಾಜಿ ಸಾಂಧಾನದ ಮೂಲಕ ಇತ್ಯರ್ಥಪಡಿಸಿವೆ.
ಕಕ್ಷಿದಾರರಿಗೆ ಒಟ್ಟು 907,65,59,025 ರೂ. ಪರಿಹಾರ ಕೊಡಿಸಲಾಗಿದೆ. ಲೋಕ ಅದಾಲತ್‌ನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ರಾಷ್ಟ್ರದಲ್ಲೇ ದಾಖಲೆಯಾಗಿದೆ ಎಂದು ಅರವಿಂದ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ನನ್ನ ಕೊಂದರೂ ಸರಿ ಆಫ್ಘನ್ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ