ETV Bharat / city

ಕದಲದ ಖಾಸಗಿ ಟ್ರಾವೆಲ್ಸ್‌ನ ಬಸ್​ಗಳು.. ಕೋಟ್ಯಂತರ ರೂ. ಲಾಸ್‌.. ಸರ್ಕಾರದ ನೆರವಿನ ನಿರೀಕ್ಷೆ - ಕೋವಿಡ್​-19

ರಾಜ್ಯದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಬರೋಬ್ಬರಿ ಒಂದು ತಿಂಗಳ ಕಾಲ ನಿಂತಲ್ಲೇ ನಿಂತಿರುವ ಬಸ್‌ಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ.

private buses
ಖಾಸಗಿ ಬಸ್​ಗಳು
author img

By

Published : May 2, 2020, 6:19 PM IST

Updated : May 2, 2020, 8:57 PM IST

ಬೆಂಗಳೂರು: ಲಾಕ್​​​ಡೌನ್​ನಿಂದ ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ. ನಿತ್ಯ ಸಂಚರಿಸಿ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುತ್ತಿದ್ದ ಖಾಸಗಿ ಹಾಗೂ ಸರ್ಕಾರಿ ಬಸ್​ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಖಾಸಗಿ ಬಸ್ ಮಾಲೀಕರು ತಮ್ಮ ಜೀವನಾಧಾರವಾಗಿದ್ದ ಬಸ್​ಗಳನ್ನು ಒಂದೆಡೆ ನಿಲ್ಲಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಬರೋಬ್ಬರಿ ಒಂದು ತಿಂಗಳ ಕಾಲ ನಿಂತಲ್ಲೇ ನಿಂತಿರುವ ಬಸ್‌ಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಒಂದು ಕಡೆ ಬಸ್‌ಗಳ ಸಂಚಾರವಿಲ್ಲ, ಅದನ್ನೇ‌‌‌‌ ನಂಬಿಕೊಂಡಿದ್ದ ಅದೆಷ್ಟೋ ಚಾಲಕರು, ನಿರ್ವಾಹಕರ ಜೀವನ ಅಧೋಗತಿಗೆ ತಲುಪಿದೆ ಅಂತಾರೆ ಬಸ್​ಗಳ ಮಾಲೀಕ ಬಾಲಕೃಷ್ಣ.

ಖಾಸಗಿ ಟ್ರಾವೆಲ್ಸ್‌ನ ಬಸ್​ಗಳ ಮಾಲೀಕರಿಗೆ ಲಾಸ್ ಮೇಲೆ ಲಾಸ್‌..
ಸರ್ಕಾರಕ್ಕೆ‌ ಡೀಸೆಲ್ ರೂಪದಲ್ಲಿ ಹಾಗೂ ಬಿಡಿ ಭಾಗಗಳ ಮೇಲಿನ ತೆರಿಗೆ ರೂಪದಲ್ಲಿ ₹120 ಕೋಟಿಯಷ್ಟು ಹಣ ಸಂದಾಯವಾಗುತ್ತದೆ. ಪ್ರತಿ ತಿಂಗಳು ರಸ್ತೆ ತೆರಿಗೆಯಿಂದ ₹15 ಕೋಟಿ ಹರಿದು ಬರುತ್ತದೆ. ಇಷ್ಟೆಲ್ಲಾ ಇದ್ದರೂ ಸರ್ಕಾರದಿಂದ ನಮಗೆ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ದಿನಗಳಲ್ಲೇ ನೌಕರರಿಗೆ ಸಂಬಳ ಕೊಡುವುದು ಕಷ್ಟ. ಈಗ ಲಾಕ್‌ಡೌನ್​​ನಿಂದಾಗಿ ಕೆಲಸವೂ‌ ಇಲ್ಲದೇ ಸಂಬಳ ಕೊಡಲು ಆಗದ ಸ್ಥಿತಿ ತಲುಪಿದ್ದೇವೆ ಎಂದಿದ್ದಾರೆ.

ಖಾಸಗಿ ಬಸ್​ಗಳನ್ನು ನಂಬಿಕೊಂಡು ಬರೋಬ್ಬರಿ 70 ಸಾವಿರ ಕಾರ್ಮಿಕರಿದ್ದಾರೆ. ಈ ಉದ್ಯಮ ಉಳಿಯಬೇಕಾದರೆ ಸರ್ಕಾರವೂ ಒಂದು ಬಸ್‌ಗೆ ಒಂದು ಲಕ್ಷ ಅಂತಾ ಅನುದಾನ ನೀಡಬೇಕು. ಆರು ತಿಂಗಳು ತೆರಿಗೆ ಮನ್ನಾ ಮಾಡಿದರೆ ನಮ್ಮ ಉಳಿವಿಗೂ ಸಹಾಯಕವಾಗುತ್ತದೆ ಎಂದು ಬಾಲಕೃಷ್ಣ ಮನವಿ ಮಾಡಿದ್ದಾರೆ.

ಎಲ್ಲಾ ಬಸ್‌ಗಳು ನಿಂತಲ್ಲೇ ನಿಂತಿರುವ ಕಾರಣದಿಂದ ಬಸ್​​ಗಳ ಬ್ಯಾಟರಿ, ಟಯರ್, ಪೇಂಟ್​ ನಿರ್ವಹಣೆ ಖರ್ಚು ಪ್ರತಿ ಬಸ್​​ಗೆ ಸುಮಾರು ಸಾವಿರ ರೂಪಾಯಿಯಷ್ಟು ಬರುತ್ತದೆ. ಜೊತೆಗೆ ಬ್ಯಾಂಕ್​, ಫೈನಾನ್ಸ್, ಖಾಸಗಿ ಬಸ್ ಮೇಲಿನ ‌ಸಾಲದ ಕಂತು 3 ತಿಂಗಳು ಮುಂದೂಡಿದ್ದಾರೆ.‌ ಆದರೆ, ಮುಂದೂಡಲ್ಪಟ್ಟ ಮೂರು ತಿಂಗಳ ಸಾಲದ ಬಡ್ಡಿಯನ್ನು ಹೆಚ್ಚುವರಿಯಾಗಿ ಕಟ್ಟಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಬಡ್ಡಿ ಮನ್ನಾ ಮಾಡಿ ಎಂದು ಬಾಲಕೃಷ್ಣ ಒತ್ತಾಯಿಸಿದ್ದಾರೆ.

Last Updated : May 2, 2020, 8:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.