ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಇದಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಆಸ್ಟರ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ನ್ಯೂ ಬಿಎಲ್ ರಸ್ತೆಯಲ್ಲಿರುವ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯವನ್ನು ಇಂದು ರವಾನೆ ಮಾಡಲಾಯಿತು.
ಕೋಲಾರ ಮೂಲದ 38 ವರ್ಷದ ಯುವಕನ ಹೃದಯವನ್ನು 58 ವರ್ಷ ವಯಸ್ಸಿನ ಪುರುಷರೊಬ್ಬರಿಗೆ ಹೃದಯ ಕಸಿ ಮೂಲಕ ಅಳವಡಿಸಲಾಗಿದೆ. ರಾಮಯ್ಯ ಆಸ್ಪತ್ರೆ ವೈದ್ಯರ ತಂಡದಿಂದ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆದಿದೆ. ರಸ್ತೆ ಅಪಘಾತದಲ್ಲಿ 38 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕನ ಬ್ರೈನ್ ಡೆಡ್ ಆಗಿ ಮೃತಪಟ್ಟಿದ್ದ.
ಇದನ್ನೂ ಓದಿ: ಕಾಲೇಜು ಪ್ರವೇಶಾತಿಯಲ್ಲಿ ಗೊಂದಲ: ಅತಂತ್ರ ಸ್ಥಿತಿಯಲ್ಲಿ 60 ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ
ಈ ವಿಷಯ ತಿಳಿಯುತ್ತಲೇ ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಲಾಯಿತು. ಹಾಗಾಗಿ, ಯುವಕನ ಹೃದಯವನ್ನು ಬೇರೆಯವರಿಗೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.