ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿಯೇ ಬಿಡುತ್ತಾ ಅನ್ನೋ ಆತಂಕ ಶುರುವಾಗಿದೆ. ಯಾಕೆಂದರೆ, ಇಂದು ಒಂದೇ ದಿನ 42 ಹೊಸ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆಯಲ್ಲಿ 15, ಬೆಂಗಳೂರಿನಲ್ಲಿ 3, ಹಾಸನದಲ್ಲಿ 5, ಬಳ್ಳಾರಿಯಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 1, ಕಲಬುರಗಿಯಲ್ಲಿ 1, ಯಾದಗಿರಿಯಲ್ಲಿ 2, ಬೀದರ್ನಲ್ಲಿ 2, ಮಂಡ್ಯದಲ್ಲಿ 1, ದಕ್ಷಿಣ ಕನ್ನಡದಲ್ಲಿ 2, ಧಾರವಾಡದಲ್ಲಿ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಹುಪಾಲು ಸೋಂಕಿತರು ಅಹಮದಾಬಾದ್ ಹಾಗೂ ಮುಂಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದಾರೆ.
ನಿರ್ಬಂಧಿತ ವಲಯದಲ್ಲಿ ಎಚ್ಚರ:
ಬೆಂಗಳೂರಿನ 6 ವಲಯಗಳಲ್ಲಿ 19 ವಾರ್ಡ್‌ಗಳು ನಿರ್ಬಂಧಿತ ವಲಯದಲ್ಲಿವೆ. ಇಲ್ಲಿ ಸುಮಾರು 119 ಸೋಂಕಿತರಿದ್ದಾರೆ. ಪಾದರಾಯನಪುರ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಕಂಟೇನ್ಮೆಂಟ್ ಝೋನ್ ಆಗಿದೆ.
ಪಾದರಾಯನಪುರದಲ್ಲಿ 46 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಂಗಸಂದ್ರದಲ್ಲಿ 41, ಹಗದೂರಿನಲ್ಲಿ 6, ಹಂಪಿನಗರದಲ್ಲಿ 4, ಜಗಜೀವನರಾಮನಗರದಲ್ಲಿ 3, ವಸಂತನಗರದಲ್ಲಿ 2, ಸುಧಾಮನಗರ, ಭೈರಸಂದ್ರ, ಯಶವಂತಪುರ, ಚಲವಾದಿ ಪಾಳ್ಯ, ದೀಪಾಂಜಲಿನಗರ, ಬಿಳೇಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್ನಲ್ಲಿ ತಲಾ ಒಬ್ಬ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾನೆ.