ETV Bharat / city

ಕಾರ್ಮಿಕ ಕಲ್ಯಾಣ ನಿಧಿ: ಖರ್ಚು ಕಾಲು ಭಾಗ, ವೆಚ್ಚವಾಗದೆ ಉಳಿದಿದೆ ಕೋಟಿ ಕೋಟಿ ಹಣ! - ಕಾರ್ಮಿಕರ ಯೋಜನೆಗಳು

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ರಡಿಯಲ್ಲಿ ಸ್ಥಾಪಿಸಲಾದ ನಿಧಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ. ಆದ್ರೆ ಬಳಕೆಯಾಗುತ್ತಿರುವುದು ತುಂಬಾ ಕಡಿಮೆ ಅನ್ನೋದನ್ನು ಅಂಕಿಅಂಶಗಳು ಹೇಳುತ್ತವೆ.

ಕಾರ್ಮಿಕ ಕಲ್ಯಾಣ ನಿಧಿ
ಕಾರ್ಮಿಕ ಕಲ್ಯಾಣ ನಿಧಿ
author img

By

Published : May 1, 2022, 11:25 AM IST

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕೆ ಹಣಕಾಸು ನೆರವು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ರಡಿಯಲ್ಲಿ ಒಂದು ನಿಧಿ ಸ್ಥಾಪಿಸಲಾಗಿದೆ. ಕಾರ್ಮಿಕರು ಮತ್ತು ಮಾಲೀಕರು ಹಾಗೂ ಸರ್ಕಾರವು ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುತ್ತಾ ಬರುತ್ತಿದೆ. ಆದರೆ ಈ ಹಣದಲ್ಲಿ ಕೋಟಿ ಕೋಟಿ ಹಣ ಖರ್ಚಾಗದೇ ಉಳಿಯುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಗೆ ಪಾವತಿಸುತ್ತಾರೆ. ಕಾರ್ಮಿಕರ ಅವಲಂಬಿತರು ಮತ್ತು ಅವರ ಮಕ್ಕಳ ಕ್ಷೇಮಾಭಿವೃದ್ಧಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವೇತನ ಮಿತಿಯಡಿ ಮೂರು ಯೋಜನೆಗಳಿದ್ದು, ಎಲ್ಲರಿಗೂ ಅನ್ವಯವಾಗುವಂತೆ ನಾಲ್ಕು ಯೋಜನೆಗಳು ಸೇರಿ ಒಟ್ಟು ಏಳು ಯೋಜನೆಗಳು ಜಾರಿಯಲ್ಲಿವೆ.

(ಮಾಸಿಕ ಸಂಬಳದ ರೂ.21,000/-ಗಳಿಗೆ ಮೀರಿರಾಬಾರದು, ವಯೋಮಿತಿ 18-60)

  1. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ: ಪ್ರೌಢಶಾಲೆ (8 ರಿಂದ 10ನೇ ತರಗತಿವರೆಗೆ)3000ರೂ., ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ 4000 ರೂ., ಪದವಿ ತರಗತಿಗೆ 5000 ರೂ, ಸ್ನಾತಕೋತ್ತರ ಪದವಿ ತರಗತಿಗಳಿಗೆ 5000 ರೂ., ಇಂಜಿನೀಯರಿಂಗ್/ವೈದ್ಯಕೀಯ 10,000 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. (ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇ.50, ಪ.ಜಾ/ಪ.ಪಂ ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು.)
  2. ಕಾರ್ಮಿಕರಿಗೆ ವೈದ್ಯಕೀಯ ನೆರವು: ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್, ಕ್ಯಾನ್ಸರ್ , ಆಂಜಿಯೋಪ್ಲಾಸ್ವಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ 1,000 ದಿಂದ 25,000 ರೂ. ವರೆಗೆ ಮತ್ತು ಆರೋಗ್ಯ ತಪಾಸಣೆಗೆ 500 ದಿಂದ 1000 ರೂ.ವರೆಗೆ ಧನ ಸಹಾಯ ನೀಡಲಾಗುತ್ತದೆ.
  3. ಕಾರ್ಮಿಕರ ಅಪಘಾತ ಧನ ಸಹಾಯ: ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಅಪಘಾತವಾದಲ್ಲಿ ಕನಿಷ್ಠ 1000 ರೂ, ಗರಿಷ್ಠ 10,000 ರೂ. ಗಳವರೆಗೆ ಧನ ಸಹಾಯ ನೀಡಲಾಗುವುದು. ಸೌಲಭ್ಯ ಪಡೆಯುವ ಕಾರ್ಮಿಕರು ಅಪಘಾತವಾದ 3 ತಿಂಗಳೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ, ಉದ್ಯೋಗ ಸಂಸ್ಥೆ ಮತ್ತು ಬೇರೆ ಯಾವುದೇ ಮೂಲದಿಂದ ಧನ ಸಹಾಯ ಪಡೆದಿರಬಾರದು.
    ಈ ಕೆಳಗಿನ ಯೋಜನೆಗೆ ಮಾಸಿಕ ಸಂಬಳದ ಮಿತಿಯಿರುವುದಿಲ್ಲ, ವಯೋಮಿತಿ 18-60
  4. ವಾರ್ಷಿಕ ವೈದ್ಯಕೀಯ ತಪಾಸಣೆಯನ್ನು ನಡೆಸುವ ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ ಧನಸಹಾಯ: ನೋಂದಾಯಿತ ಕಾರ್ಮಿಕ ಸಂಘಟನೆಗಳು/ಸರ್ಕಾರೇತರ ಸಂಸ್ಧೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ನಡೆಸುವ ಶಿಬಿರದಲ್ಲಿ ಭಾಗವಹಿಸುವ ಕಾರ್ಮಿಕರ ಗರಿಷ್ಠ ಮಿತಿ ಹಾಗೂ ನೀಡುವ ಚಿಕಿತ್ಸಾ ಕ್ರಮವನ್ನು ಆಧರಿಸಿ ರೂ.1,00,000 ಗಳವರೆಗೆ ಧನ ಸಹಾಯ ನೀಡಲಾಗುತ್ತದೆ. ಒಂದು ಸಂಘಟನೆಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.
  5. ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ನೋಂದಾಯಿತ ಕಾರ್ಮಿಕ ಸಂಘಗಳಿಗೆ ಧನಹಾಯ: ನೋಂದಾಯಿತ ಕಾರ್ಮಿಕ ಸಂಘಟನೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಂಡಲ್ಲಿ 1,00,000 ವರೆಗೆ ಧನ ಸಹಾಯ ನೀಡಲಾಗುವುದು. ವರ್ಷದಲಿ ಒಂದು ಸಂಘಟನೆಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.
  6. ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ: ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ, ಉದ್ಯೋಗ ಸಂಸ್ಥೆ ಮತ್ತು ಬೇರೆ ಯಾವುದೇ ಮೂಲದಿಂದ ಧನ ಸಹಾಯ ಪಡೆಯದೆ ಅವಲಂಬಿತರು ಕಾರ್ಮಿಕ ಮೃತಪಟ್ಟ 6 ತಿಂಗಳೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿದಲ್ಲಿ 10,000 ರೂ ನೀಡಲಾಗುತ್ತದೆ.
  7. ಸಮುದಾಯ ಭವನ ಪೀಣ್ಯ 1ನೇ ಹಂತ ಆಂಜನೇಯ ದೇವಸ್ಥಾನದ ಎದುರು ಬೆಂಗಳೂರು, ಮೈಸೂರು ರಸ್ತೆಯ ಬಾಪೂಜಿನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ತಾನದ ಹಿಂಭಾಗದಲ್ಲಿರುವ ಸಮುದಾಯ ಭವನ, ಸಿಂದಗಿ ರಸ್ತೆ, ಬಿಜಾಪುರ ಮತ್ತು ಗದಗ ನಗರದ ಸೆಟಲ್‍ಮೆಂಟ್ ಎರಿಯಾದಲ್ಲಿರುವ ಸಮುದಾಯ ಭವನಗಳನ್ನು ಕಾರ್ಮಿಕರು ಮತ್ತು ಮಕ್ಕಳಿಗೆ ವಿವಾಹ ಮತ್ತು ಶುಭ ಸಮಾರಂಭಗಳಿಗೆ ರಿಯಾಯತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ.
    ಪ್ರತಿ ವರ್ಷ ಜನವರಿ 15 ರೊಳಗೆ ಕಾರ್ಮಿಕರು ಮತ್ತು ಮಾಲೀಕರು ಹಾಗೂ ಸರ್ಕಾರ ರೂ. 20 : 40 : 20 ರಂತೆ ಒಬ್ಬ ಕಾರ್ಮಿಕನಿಗೆ ವಂತಿಕೆಯನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಪಾವತಿಸುವುದು ಕಡ್ಡಾಯ.
    ನಿಧಿ ಸಂಗ್ರಹದ ವಿವರ:
ವರ್ಷಒಟ್ಟು ಕಾರ್ಖಾನೆಒಟ್ಟು ಕಾರ್ಮಿಕರುಕಾರ್ಮಿಕರ ವಂತಿಗೆಮಾಲೀಕರ ವಂತಿಗೆಸರ್ಕಾರದ ವಂತಿಗೆ ಒಟ್ಟು ವಂತಿಗೆ(ಕೋಟಿ ರೂ).
2015-16 16157 33.02 ಲಕ್ಷ 2.14 ಕೋಟಿ ರೂ. 4.29 ಕೋಟಿ ರೂ. 2.40 ಕೋಟಿ ರೂ. 8.84
2016-17 15,953 35.8 ಲಕ್ಷ 2.14 ಕೋಟಿ 4.29 ಕೋಟಿ 2.40 ಕೋಟಿ 8.84
2017-18 16,124 34.38 ಲಕ್ಷ 6.87 ಕೋಟಿ 13.75 ಕೋಟಿ 6 ಕೋಟಿ 26.63
2018-19 17,005 39.01 ಲಕ್ಷ 7.80 ಕೋಟಿ 15.6 ಕೋಟಿ 5 ಕೋಟಿ 28.4
2019-20 16,025 41.31 ಲಕ್ಷ 8.26 ಕೋಟಿ 16.52 ಕೋಟಿ 7.18 ಕೋಟಿ 31.96
2020-21 16,955 41.29 ಲಕ್ಷ 8.25 ಕೋಟಿ 16.5 ಕೋಟಿ 6 ಕೋಟಿ 30.75

ಐದು ವರ್ಷದ ವಂತಿಗೆ ವೆಚ್ಚದ ವಿವರ: 2015-16 ರಲ್ಲಿ 9258 ಕಾರ್ಮಿಕರಿಗೆ 1,65,17,437 ರೂ., 2016-17 ರಲ್ಲಿ 13,755 ಕಾರ್ಮಿಕರಿಗೆ 2,70,75,850 ರೂ., 2017-18 ರಲ್ಲಿ 18,688 ಕಾರ್ಮಿಕರಿಗೆ 7,28,23,200 ರೂ‌., 2018-19 ರಲ್ಲಿ 22,164 ಕಾರ್ಮಿಕರಿಗೆ 8,74,96,011 ರೂ., 2019-20 ರಲ್ಲಿ 27,557 ಕಾರ್ಮಿಕರಿಗೆ 10,68,78,252 ರೂ.ಗಳ ಧನ ಸಹಾಯವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿತರಿಸಲಾಗಿದೆ.

2020-21 ರ ವೆಚ್ಚದ ವಿವರ: ಶೈಕ್ಷಣಿಕ ಪ್ರೋತ್ಸಾಹಧನ ಸಹಾಯ, ವೈದ್ಯಕೀಯ ನೆರವು,ಮೃತ ಕಾರ್ಮಿಕನ ಅಂತ್ಯಸಂಸ್ಕಾರಕ್ಕೆ ಧನ ಸಹಾಯ,ಕಾರ್ಮಿಕರ ಅಪಘಾತ ಧನ ಸಹಾಯ, ಅಂಗವಿಕಲ ಕಾರ್ಮಿಕರಿಗೆ ಕೃತಕ ಅಂಗಸಾಧನ ಖರೀದಿಸಲು,ವಾರ್ಷಿಕ ಕ್ರೀಡಾ ಚಟುವಟಿಕೆಗಳಿಗೆ 14,527 ಕಾರ್ಮಿಕರಿಗೆ 6,28,16,000 ರೂ.ಪಾವತಿಸಲಾಗಿದ್ದು, ವರ್ಷದ ಪೂರ್ವ ವಿವರ ಲಭ್ಯವಾಗಿಲ್ಲ. 12 ಕೋಟಿ ರೂ.ಗಳ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

134.77 ಕೋಟಿ ವಂತಿಕೆ ಸಂಗ್ರಹ:

  • 2015-16 ರಲ್ಲಿ 8.19 ಕೋಟಿ ರೂ. ನಿಧಿಯಲ್ಲಿ 1,65,17,437 ರೂ. ವೆಚ್ಚ ಮಾಡಿದ್ದು, 6.54 ಕೋಟಿ ವೆಚ್ಚವಾಗದೆ ಉಳಿದಿದೆ‌.
  • 2016-17 ರಲ್ಲಿ 8.84 ಕೋಟಿ ರೂ. ನಿಧಿಯಲ್ಲಿ 2,70,75,850 ರೂ. ವೆಚ್ಚ ಮಾಡಿದ್ದು 6.13 ಕೋಟಿ ವೆಚ್ಚವಾಗದೆ ಉಳಿದಿದೆ.
  • 2017-18 ರಲ್ಲಿ 26.63 ಕೋಟಿ ರೂ. ನಿಧಿಯಲ್ಲಿ 7,28,23,200 ರೂ‌.ವೆಚ್ಚ ಮಾಡಲಾಗಿದ್ದು, 19.35 ಕೋಟಿ ವೆಚ್ಚವಾಗದೆ ಉಳಿದಿದೆ.
  • 2018-19 ರಲ್ಲಿ 28.4 ಕೋಟಿ ರೂ. ನಿಧಿಯಲ್ಲಿ 8,74,96,011 ರೂ.ವೆಚ್ಚ ಮಾಡಲಾಗಿದ್ದು, 19.65 ಕೋಟಿ ವೆಚ್ಚವಾಗದೆ ಉಳಿದಿದೆ‌.
  • 2019-20 ರಲ್ಲಿ 31.96 ಕೋಟಿ ರೂ. ನಿಧಿಯಲ್ಲಿ 10,68,78,252 ರೂ.ವೆಚ್ಚ ಮಾಡಲಾಗಿದ್ದು, 21.27 ಕೋಟಿ ವೆಚ್ಚವಾಗದೆ ಉಳಿದಿದೆ‌.
  • 2020-21 ರಲ್ಲಿ 30.75 ಕೋಟಿ ರೂ. ನಿಧಿಯಲ್ಲಿ 6,28,16,000 ರೂ. ವೆಚ್ಚ ಮಾಡಲಾಗಿದ್ದು, 24.47 ಕೋಟಿ ವೆಚ್ಚವಾಗದೆ ಉಳಿದಿದೆ‌.
  • ಒಟ್ಟು ಕಳೆದ ಆರು ವರ್ಷದಲ್ಲಿ ಕಾರ್ಮಿಕ ಕಲ್ಯಾಣ ನಿಧಿಗೆ 134.77 ಕೋಟಿ ವಂತಿಕೆ ಸಂಗ್ರಹ ಮಾಡಿದ್ದು, ಅದರಲ್ಲಿ ವೆಚ್ಚ ಮಾಡಿರುವುದು ಕೇವಲ 37.36 ಕೋಟಿ ಹಣ ಮಾತ್ರ. ಇನ್ನು
    97.41 ಕೋಟಿ ರೂ. ವೆಚ್ಚವಾಗದೆ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಉಳಿಕೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತಿದ್ದರೂ ಅದನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಕಾರ್ಮಿಕ ಇಲಾಖೆ ವಿಫಲವಾಗಿದೆ. ಹೊಸ ಹೊಸ ಯೋಜನೆಗಳನ್ನು ಕಾರ್ಮಿಕರ ಕಲ್ಯಾಣ ನಿಧಿಯಡಿ ಸೇರಿಸದೇ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನುವುದು ಕಾರ್ಮಿಕ ಮುಖಂಡರ ಆರೋಪ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಿಗದಿಯಾದ ಅನುದಾನ ಅಷ್ಟು, ಬಿಡುಗಡೆಯಾಗಿದ್ದು ಒಂದಿಷ್ಟು, ವೆಚ್ಚವಾಗಿದ್ದು ಎಳ್ಳಷ್ಟು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.