ETV Bharat / city

ಕಾಂಗ್ರೆಸ್​ ಪಾದಯಾತ್ರೆ ಉದ್ಘಾಟಿಸುವಂತೆ ವಚನಾನಂದ ಸ್ವಾಮೀಜಿಗೆ ಡಿಕೆಶಿ ಆಹ್ವಾನ - ಕಾಂಗ್ರೆಸ್​ ಪಾದಯಾತ್ರೆ ಉದ್ಘಾಟಿಸುವಂತೆ ವಚನಾನಂದ ಸ್ವಾಮೀಜಿಗೆ ಡಿಕೆಶಿ ಆಹ್ವಾನ

ಜನವರಿ 9ರಿಂದ ಆರಂಭವಾಗಲಿರುವ ಮೇಕೆದಾಟು ನೀರಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ವಚನಾನಂದ ಸ್ವಾಮೀಜಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮನವಿ ಮಾಡಿದ್ದಾರೆ.

Kpcc president invites Dks for  launch padayatra for mekedaatu
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಉದ್ಘಾಟಿಸುವಂತೆ ವಚನಾನಂದ ಸ್ವಾಮೀಜಿಗೆ ಡಿಕೆಶಿ ಆಹ್ವಾನ
author img

By

Published : Jan 6, 2022, 12:19 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹರಿಹರದ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ, ಆಶೀರ್ವಾದ ಪಡೆದರು.

ಜನವರಿ 9ರಿಂದ ಆರಂಭವಾಗಲಿರುವ ಮೇಕೆದಾಟು ನೀರಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸಹ ಶ್ರೀಗಳಿಗೆ ಇದೇ ಸಂದರ್ಭ ಡಿಕೆಶಿ ಮನವಿ ಮಾಡಿದರು. ಬುಧವಾರ ಸಭೆ ಸೇರಿ ಚರ್ಚಿಸಿರುವ ಕಾಂಗ್ರೆಸ್ ನಾಯಕರು ಸಂಜೆ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟಪಡಿಸಿದರು.

Kpcc president invites Dks for  launch padayatra for mekedaatu Slug
ವಚನಾನಂದ ಶ್ರೀಗಳ ಆಶೀರ್ವಾದ ಪಡೆದ ಡಿಕೆಶಿ

ಯಾವುದೇ ಕಾರಣಕ್ಕೂ ಪಾದಯಾತ್ರೆ ರದ್ದುಪಡಿಸುವುದಿಲ್ಲ. ಸರ್ಕಾರ ಯಾವುದೇ ಕ್ರಮವನ್ನು ಬೇಕಾದರೂ ಕೈಗೊಳ್ಳಲಿ ಎಂದಿದ್ದಾರೆ. ನೀರಿಗಾಗಿ ನಮ್ಮ ನಡಿಗೆ ನಡೆಯಲಿದೆ. ಜನರ ಸಮಸ್ಯೆಗಾಗಿ ನಾವು ಹೋರಾಡುತ್ತಿದ್ದೇವೆ. ಕೋವಿಡ್ ನಿರ್ಬಂಧ ಹೇರಿ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ನಿಯಮಾವಳಿಗಳನ್ನು ಪಾಲಿಸಿಕೊಂಡೇ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಜನವರಿ 9ರಂದು ರಾಮನಗರದ ಕನಕಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮೇಕೆದಾಟು ಪ್ರದೇಶದಿಂದ ಕಾಂಗ್ರೆಸ್ ರಾಜ್ಯ ನಾಯಕರ ಪಾದಯಾತ್ರೆ ಆರಂಭವಾಗಲಿದೆ. ಪ್ರತಿದಿನ 20 ಕಿ.ಮೀ.ನಂತೆ ಐದು ದಿನ ಒಟ್ಟು 100 ಕಿ.ಮೀ ನಡೆದು ಬೆಂಗಳೂರು ತಲುಪುವ ರಾಜ್ಯ ನಾಯಕರು ನಂತರದ 5 ದಿನ ಬೆಂಗಳೂರು ನಗರದ ವಿವಿಧ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಜನವರಿ 19ರಂದು ಸಮಾರೋಪ ಸಮಾರಂಭ ನಡೆಯಲಿದೆ.

ರಾಜ್ಯ ಸರ್ಕಾರ ಈಗಾಗಲೇ ವಾರಾಂತ್ಯ ಕರ್ಫ್ಯೂ ಆದೇಶ ಹೊರಡಿಸಿದ್ದು, ವಾರದ ದಿನಗಳಲ್ಲಿಯೂ ಧರಣಿ, ಪ್ರತಿಭಟನೆ, ಹೋರಾಟ, ಮೆರವಣಿಗೆ ನಡೆಸದಂತೆ ನಿರ್ಬಂಧ ಹೇರಿದೆ. ದೇಶದೆಲ್ಲೆಡೆ ಕೋವಿಡ್ ಮೂರನೇ ಅಲೆ ಆತಂಕ ಎದುರಾಗಿದ್ದು, ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರು ಸಹ ತಮ್ಮ ರ್‍ಯಾಲಿ ರದ್ದುಪಡಿಸಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ತಾವು ಹೈಕಮಾಂಡ್ ನಾಯಕರ ಸಮ್ಮತಿ ಮೇರೆಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದಿನಿಂದ ಸೆಕ್ಷನ್ 144 ಜಾರಿ.. ನಿಯಮ ಉಲ್ಲಂಘಿಸಿದರೆ ಪೊಲೀಸರಿಂದ ಕಠಿಣ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.