ನೆಲಮಂಗಲ : ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ 50 ರೂಪಾಯಿ ಹಣಕ್ಕೆ ಇಬ್ಬರು ಕಿತ್ತಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ.
ಅವಲಕುಪ್ಪೆ ನಿವಾಸಿ ಶಶಿಧರ್ (26) ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಬೈರಪ್ಪ ಎನ್ನುವ ವ್ಯಕ್ತಿಯಿಂದ 50 ರೂಪಾಯಿಯನ್ನು ಶಶಿಧರ್ ಸಾಲ ಪಡೆದಿದ್ದ. ಇಂದು ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ಬೈರಪ್ಪನ ಕಣ್ಣಿಗೆ ಶಶಿಧರ್ ಬಿದ್ದಿದ್ದಾನೆ. ಸಾಲದ ಹಣದ ವಿಚಾರಕ್ಕೆ ಇಬ್ಬರಿಗೂ ಬಸ್ಸಿನಲ್ಲಿಯೇ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಬೈರಪ್ಪ, ಶಶಿಧರ್ಗೆ ಚಾಕುವಿನಿಂದ ಇರಿದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ಗಾಯಾಳುವನ್ನು ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.