ETV Bharat / city

ಬೆಚ್ಚಿಬಿದ್ದ ಕರ್ನಾಟಕ - ಒಂದೇ ದಿನ 48 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ: 217 ಜನ ಬಲಿ

author img

By

Published : Apr 30, 2021, 7:31 PM IST

Updated : Apr 30, 2021, 8:01 PM IST

corona
corona

19:28 April 30

15 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆಯ ತೀವ್ರತೆ ಎಷ್ಟಿದೆ ಎಂಬುದಕ್ಕೆ ಇಂದು ದೃಢಪಟ್ಟಿರುವ ಸೋಂಕಿತರ ಸಂಖ್ಯೆಯೇ ಸಾಕ್ಷಿ.‌ ಇಂದು ಒಂದೇ 48,296 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 15,23,142ಕ್ಕೆ ಏರಿಕೆ ಆಗಿದೆ.

ಇತ್ತ ಕೋವಿಡ್​ಗೆ 217ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 15,523ಕ್ಕೆ ಏರಿಕೆ ಆಗಿದೆ. 14,884 ಮಂದಿ ಗುಣಮುಖರಾಗಿದ್ದು, ಈವರೆಗೆ 11,24,909 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ 3,82,690 ಪ್ರಕರಣಗಳು ಇವೆ. 

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 25.44 ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ ಶೇ.0.44 ರಷ್ಟಿದೆ.‌ ಯುಕೆಯಿಂದ 114 ಪ್ರಯಾಣಿಕರು ಆಗಮಿಸಿದ್ದಾರೆ. ಈವರೆಗೆ 64 ಕೋವಿಡ್ ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ಹರಡಿದೆ. ಹಾಗೇ ಯುಕೆಯ ರೂಪಾಂತರ ಕೊರೊನಾ 46 ಜನರಿಗೆ ತಗುಲಿದೆ. ಸೌತ್ ಆಫ್ರಿಕಾ ಸೋಂಕು 6‌ಮಂದಿಗೆ ಡಬಲ್ ಮ್ಯುಟೇಷನ್‌ 20 ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ದಾಖಲೆಯ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ರಾಜ್ಯದಲ್ಲಿ ಇದುವರೆಗಿನ ಒಂದು ದಿನದ ಅತ್ಯಂತ ಹೆಚ್ಚು ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ ನಿತ್ಯ 60 ಸಾವಿರದ ಗಡಿ ದಾಟುತ್ತಿದೆ. ಆದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 50 ಸಾವಿರದ ಗಡಿಗೆ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ದಾಖಲಾಗಿವೆ. ಇದು ರಾಜ್ಯದ ಜನರ ಕಳವಳಕ್ಕೂ ಕಾರಣವಾಗಿದೆ. (ಕೊರೊನಾ ಗೆದ್ದ 97 ವರ್ಷದ ಅಜ್ಜಿ.. ಈ ಜೀವದ ಆತ್ಮಸ್ಥೈರ್ಯ ನಮಗೆಲ್ಲ ಸ್ಫೂರ್ತಿ..)

Last Updated : Apr 30, 2021, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.