ETV Bharat / city

ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರದಿಂದ ಆದೇಶ

IPS officers transfer: ಐಪಿಎಸ್ ಅಧಿಕಾರಿಗಳಾದ ಎಸ್​.ಡಿ.ಶರಣಪ್ಪ, ಡಿ.ದೇವರಾಜ್, ಡಾ.ಅನೂಪ್ ಶೆಟ್ಟಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

author img

By

Published : Jan 9, 2022, 3:58 PM IST

ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಪೂರ್ವ ವಿಭಾಗದ ಡಿಸಿಪಿ ಎಸ್​.ಡಿ.ಶರಣಪ್ಪ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೆ ಮಾಡಲಾಗಿದೆ. ಈ ಮೊದಲು ಕೆಎಸ್​​ಪಿಎಸ್ ಅಧಿಕಾರಿ ರವಿಕುಮಾರ್ ಈ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಆಗಿದ್ದ ಡಿ.ದೇವರಾಜ್ ಅವರನ್ನು ಕೋಲಾರದ ಎಸ್‌ಪಿಯಾಗಿ ತಕ್ಷಣ ಅಧಿಕಾರ ವಹಿಸಿಕೊಳ್ಳುವಂತೆ ಅದೇಶಿಸಿದೆ. ಈ ಮೊದಲು ಡೆಕ್ಕ ಕಿಶೋರ್ ಬಾಬು ಕೋಲಾರದ ಎಸ್‌ಪಿಯಾಗಿದ್ದರು.

IPS Officers Transferred
ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಡಾ.ಅನೂಪ್ ಶೆಟ್ಟಿ ಅವರನ್ನು ಕಮಾಂಡೆಂಟ್ ಕೆ.ಎಸ್.ಆರ್.ಪಿ (ರಾಜ್ಯ ಮೀಸಲು ಪೊಲೀಸ್) ಯಿಂದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ಈ ಮೊದಲು ಡಿಸಿಪಿಯಾಗಿ ಸಿಕೆ ಬಾಬಾ ಕಾರ್ಯನಿರ್ವಹಿಸುತ್ತಿದ್ದರು.

(ಇದನ್ನೂ ಓದಿ: Congress Mekedatu padayatra: 4 ಕಿ.ಮೀ ನಡೆಯುಷ್ಟರಲ್ಲಿ ಸಿದ್ದರಾಮಯ್ಯಗೆ ಸುಸ್ತು, ಕಾರಿನಲ್ಲಿ ವಾಪಸ್)​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.