ETV Bharat / city

ರಾಜ್ಯದಲ್ಲಿಂದು 435 ಮಂದಿಗೆ ಕೋವಿಡ್ ದೃಢ; 9 ಸೋಂಕಿತರು ಬಲಿ

ಕೊರೊನಾ ಸೋಂಕಿಗೆ ಇಂದು ರಾಜ್ಯದಲ್ಲಿ 9 ಮಂದಿ ಬಲಿಯಾಗಿದ್ದು, 435 ಮಂದಿಗೆ ಸೋಂಕು ದೃಢ ಪಟ್ಟಿದೆ.

covid
ಕೋವಿಡ್
author img

By

Published : Jan 18, 2021, 9:10 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು 435 ಮಂದಿಗೆ ದೃಢ ಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,32,432 ಕ್ಕೆ ಏರಿಕೆ ಆಗಿದೆ.

ಇಂದು 9 ಮಂದಿ ಕೋವಿಡ್​ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,175ಕ್ಕೆ ಏರಿಕೆ ಆಗಿದೆ. ಇದರಲ್ಲಿ19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 973 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,12,205 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.‌ ತೀವ್ರ ನಿಗಾ ಘಟಕದಲ್ಲಿ 177 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 8033 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಕಳೆದ 7 ದಿನಗಳಲ್ಲಿ 19,843 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 55,145 ಇದ್ದರೆ, ದ್ವಿತೀಯ ಸಂಪರ್ಕದಲ್ಲಿ 62,218 ಜನರು ಇದ್ದಾರೆ.‌ ಈವರೆಗೆ ಯುಕೆಯಿಂದ ಬಂದ 50 ಮಂದಿಗೆ ಪಾಸಿಟಿವ್ ಆಗಿದ್ದು ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ದೃಢವಾಗಿದೆ. ಇನ್ನು ಯುಕೆಯಿಂದ ಬಂದವರಲ್ಲಿ 14 ಜನಕ್ಕೆ ರೂಪಾಂತರ ಕೊರೊನಾ ದೃಢಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.