ಬೆಂಗಳೂರು: ರಾಜ್ಯದಲ್ಲಿ ಇಂದು 6257 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದಾರೆ. 6473 ಸೋಂಕಿತರು ಗುಣಮುಖರಾಗುವ ಮೂಲಕ ಕೊರೊನಾ ನಿಯಂತ್ರಣ ಹಾದಿ ತಲುಪುತ್ತಿದೆ ಎಂಬಂತಾಗಿದೆ.
![Karnataka covid reports](https://etvbharatimages.akamaized.net/etvbharat/prod-images/8382718_293_8382718_1597155894760.png)
ಈವರೆಗೆ ರಾಜ್ಯದಲ್ಲಿ 1,05,599 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ರಾಜ್ಯದ 1,88,611 ಖಚಿತ ಕೋವಿಡ್ ಪ್ರಕರಣಗಳ ಪೈಕಿ 1,05,599 ಗುಣಮುಖರಾಗಿದ್ದು, 79,606 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಇಂದು 86 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೇ ಮೃತರಾಗಿದ್ದು, ಕೋವಿಡ್ ಬಲಿಯಾದವರ ಸಂಖ್ಯೆ 3,398ಕ್ಕೆ ಏರಿದೆ. ಅಲ್ಲದೆ 699 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ 3,32,997 ಮಂದಿ ನಿಗಾವಣಿಯಲ್ಲಿದ್ದು, ಈವರೆಗೆ ಸುಮಾರು 17,72,991 ಮಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.
![Karnataka covid reports](https://etvbharatimages.akamaized.net/etvbharat/prod-images/8382718_739_8382718_1597155914256.png)
ಕೋವಿಡ್ -19 ಸೋಂಕಿತರ ಡಿಸ್ಜಾರ್ಜ್ ನಿಯಮಾವಳಿ ಪರಿಷ್ಕೃತ
ಆರೋಗ್ಯ ಇಲಾಖೆಯಿಂದ ಕೋವಿಡ್-19 ಸೋಂಕಿತರನ್ನು ಬಿಡುಗಡೆಗೊಳಿಸಲು ನಿಯಮಾವಳಿಗಳನ್ನು ಒಳಗೊಂಡಂತೆ ಪರಿಷ್ಕೃತ ಆವೃತ್ತಿ-5 ಬಿಡುಗಡೆಗೊಳ್ಳಿಸಲಾಗಿದೆ. ಬಿಡುಗಡೆ ವೇಳೆ ಯಾವುದೇ ಬದಲಾವಣೆ ಇಲ್ಲದೇ, ಹಳೇಯ ಮಾನದಂಡವೇ ಇರಲಿದೆ. ಆದರೆ ಡಿಸ್ಜಾರ್ಜ್ ವೇಳೆ ನಡೆಸುತ್ತಿದ್ದ ಕೋವಿಡ್ ಪರೀಕ್ಷೆಯನ್ನ ನಿಲ್ಲಿಸಲಾಗಿದೆ. ಸೋಂಕಿನ ಲಕ್ಷಣ ರಹಿತ, ಸೌಮ್ಯ, ಮತ್ತು ಮಧ್ಯಮ ಪ್ರಕರಣಗಳಿಗೆ ಪುನರಾವರ್ತಿತ ಪರೀಕ್ಷೆ ಅಗತ್ಯವಿಲ್ಲವೆಂದು ತಿಳಿಸಿದೆ.
ಇನ್ನು ಹೀಗೆ ಬಿಡುಗಡೆಯಾದವರು ಮನೆಯಲ್ಲಿಯೇ 7 ದಿನಗಳ ಕಾಲ ಕ್ವಾರಂಟೈನ್ ಇರುವುದು ಕಡ್ಡಾಯ. ಆಸ್ಪತ್ರೆಯಿಂದ ತೀವ್ರ ಸೋಂಕಿಗೆ ತುತ್ತಾಗಿ ಡಿಸ್ಜಾರ್ಜ್ ಆಗುವವರು 14 ದಿನಗಳ ಕಾಲ ಕ್ವಾರಂಟೈನ್ ಇರಲೇಬೇಕು.