ಬೆಂಗಳೂರು: ರಾಜ್ಯದಲ್ಲಿಂದು 1,58,442 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಈ ಪೈಕಿ 5983 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,90,338ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ ಕೊರೊನಾ ತಗ್ಗಿದ್ದು, ಇಂದು ಪಾಸಿಟಿವಿಟಿ ದರ ಶೇ 3.77 ರಷ್ಟಿದೆ. 10,685 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 26,10,157 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,46,726 ರಷ್ಟು ಇವೆ. ಕೋವಿಡ್ಗೆ ಇಂದು 138 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 33,434 ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ ಶೇ.2.30 ರಷ್ಟು ಇದೆ.
ಕೊರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಇಳಿಕೆಯಾಗುತ್ತಿದ್ದು, ಜನ ನಿರಾಳರಾಗಿದ್ದಾರೆ.