ETV Bharat / city

ರಾಜ್ಯದಲ್ಲಿ 3,652 ಜನರಿಗೆ ಕೊರೊನಾ: 24 ಸೋಂಕಿತರು ಬಲಿ

author img

By

Published : Nov 1, 2020, 9:01 PM IST

Updated : Nov 1, 2020, 10:48 PM IST

ರಾಜ್ಯದ ಇಂದಿನ ಕೊರೊನಾ ವರದಿ..

covid-bulletin
ಕರ್ನಾಟಕ ಕೊರೊನಾ

ಬೆಂಗಳೂರು: ರಾಜ್ಯದಲ್ಲಿಂದು 3,652 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,27,064ಕ್ಕೆ ಏರಿಕೆ ಆಗಿದೆ.‌ ಸೋಂಕಿಗೆ 24 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 11,192ಕ್ಕೆ ಏರಿದೆ. ಇಂದು 8,053 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 7,65,261 ಜನರು ಡಿಸ್ಜಾರ್ಜ್ ಆಗಿದ್ದಾರೆ.

19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.‌ ಇನ್ನು ರಾಜ್ಯದಲ್ಲಿ ಸದ್ಯ 50,592 ಸಕ್ರಿಯ ಪ್ರಕರಣಗಳು ಇದ್ದು, 935 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಕಳೆದ 7 ದಿನಗಳಿಂದ 48,217 ಮಂದಿ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ.

ಪ್ರಾಥಮಿಕವಾಗಿ 2,94,171 ಜನ, ದ್ವಿತೀಯವಾಗಿ 2,91,073 ಜನರು ಸೋಂಕಿತರ ಸಂಪರ್ಕದಲ್ಲಿದ್ದಾರೆ.‌ ವಿಮಾನ ನಿಲ್ದಾಣದಲ್ಲಿ 906 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿಂದು 2167 ಕೋವಿಡ್ ಪಾಸಿಟಿವ್ ಪ್ರಕರಣ: 10 ಮಂದಿ ಸೋಂಕಿತರು ಬಲಿ:
ನಗರದ ಕೋವಿಡ್ ಪ್ರಕರಣ ಇಂದು ಮತ್ತೆ ಎರಡು ಸಾವಿರ ಮೇಲ್ಪಟ್ಟು ಬಂದಿವೆ. 2167 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 10 ಮಂದಿ ಮೃತಪಟ್ಟಿದ್ದಾರೆ. 6018 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 3,38,636 ಕ್ಕೆ ಏರಿಕೆಯಾಗಿದ್ದು, ಈವರೆಗೆ 3,04,163 ಮಂದಿ ಬಿಡುಗಡೆಯಾಗಿದ್ದಾರೆ. 30,598 ಸಕ್ರಿಯ ಕೋವಿಡ್ ಪಾಸಿಟಿವ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಮೃತಟ್ಟವರ ಸಂಖ್ಯೆ 3,874 ಕ್ಕೆ ಏರಿಕೆಯಾಗಿದೆ. 453 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Nov 1, 2020, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.