ETV Bharat / city

ಜೆಡಿಎಸ್‍ ಸದಸ್ಯರು ಎತ್ತಿದ ವಿಷಯಕ್ಕೆ ನಾಳೆ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್ - ರಾಜ್ಯ ಸರ್ಕಾರ ಕಾಮಗಾರಿಗಳು ಸ್ಥಗಿತ

ಪ್ರಶ್ನೋತ್ತರ ಅವಧಿ ಮುಗಿದ ನಂತರ ಜೆಡಿಎಸ್‌ ಸದಸ್ಯರಾದ ಹಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಮತ್ತಿತರು ವಿಷಯ ಪ್ರಸ್ತಾಪಿಸಲು ಮುಂದಾದಾಗ, ನೀವು ನೀಡಿರುವ ನಿಲುವಳಿ ಸೂಚನೆ 2 ಬಾರಿ ಚರ್ಚೆಯಾಗಿದೆ.

speaker-gave-permission-to-discuses-about-development-works-stops
ಸ್ಪೀಕರ್
author img

By

Published : Mar 15, 2021, 6:49 PM IST

ಬೆಂಗಳೂರು : ಮೈತ್ರಿ ಸರ್ಕಾರದ ಅವಧಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ರಾಜ್ಯ ಸರ್ಕಾರ ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಲು ಜೆಡಿಎಸ್ ಶಾಸಕರು ನೀಡಿದ್ದ ನಿಲುವಳಿ ಸೂಚನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ಕ್ಕೆ ಬದಲಾಯಿಸಿ ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.

ಪ್ರಶ್ನೋತ್ತರ ಅವಧಿ ಮುಗಿದ ನಂತರ ಜೆಡಿಎಸ್‌ ಸದಸ್ಯರಾದ ಹಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಮತ್ತಿತರು ವಿಷಯ ಪ್ರಸ್ತಾಪಿಸಲು ಮುಂದಾದಾಗ, ನೀವು ನೀಡಿರುವ ನಿಲುವಳಿ ಸೂಚನೆ 2 ಬಾರಿ ಚರ್ಚೆಯಾಗಿದೆ. ಈ ವಿಚಾರವನ್ನು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲು ಅವಕಾಶವಿದೆ. ಹೀಗಾಗಿ ನಿಯಮ 60 ರ ಬದಲಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಜೆಡಿಎಸ್ ಸದಸ್ಯರು ನಿಲುವಳಿ ಸೂಚನೆ ನೀಡಿರುವ ವಿಚಾರ ತಾಂತ್ರಿಕವಾಗಿ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಈ ವಿಚಾರಕ್ಕೆ ಉತ್ತರಿಸಲು ಸರ್ಕಾರ ಸಿದ್ದವಿದೆ. ನಿಯಮ 69ಕ್ಕೆ ವರ್ಗಾಯಿಸುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಜೆಡಿಎಸ್ ಸದಸ್ಯರು ಚರ್ಚೆಗೆ ಸಮಯ ನಿಗದಿಪಡಿಸುವಂತೆ ಆಗ್ರಹಿಸಿದಾಗ ಅಸಮಾಧಾನಗೊಂಡ ಸಭಾಧ್ಯಕ್ಷರು, ನೀವು ಮೊದಲ ಬಾರಿಗೆ ಗೆದ್ದು ಬಂದವರಲ್ಲ. ಸದನ ನಡೆಯುತ್ತಿರುವುದು ಮೊದಲ ವರ್ಷವಲ್ಲ ಎಲ್ಲರೂ ಎದ್ದು ನಿಂತರೆ ಹೇಗೆ? ಶಾಸಕರಿಗೆ ಶಿಸ್ತು ಕಲಿಸಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.