ಬೆಂಗಳೂರು: ಇಂದು ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಜೆಡಿಎಸ್ ಶಾಸಕರು ವಿಧಾನಸೌಧಕ್ಕೆ ಹೊರಟಿದ್ದಾರೆ.
ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌ನಿಂದ ಈಗಾಗಲೇ ಬಸ್ಸಿನ ಮೂಲಕ ವಿಧಾನಸೌಧಕ್ಕೆ ಸಹಕಾರ ಸಚಿವ ಬಂಡಪ್ಪ ಕಾಶಂಪುರ್, ಎಂಎಸ್ಸಿ ಶರವಣ ನೇತೃತ್ವದಲ್ಲಿ ಎಲ್ಲ ಶಾಸಕರು ತೆರಳಿದ್ದಾರೆ. ಶಾಸಕರ ಪ್ರಯಾಣಕ್ಕಾಗಿ ಕಳೆದ 7 ದಿನಗಳಿಂದ ರೆಸಾರ್ಟ್ನಲ್ಲಿ ಬಸ್ ವ್ಯವಸ್ಥೆ ಇತ್ತು. ಶಾಸಕರಿಗಾಗಿಯೇ ಆ ಬಸ್ ಅನ್ನು ಬುಕ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಅಧಿವೇಶನದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ. ಸಿಎಂ ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರಗಳೇನು ಎಂಬುದರ ಮೇಲೆ ಜೆಡಿಎಸ್ ಶಾಸಕರು ರೆಸಾರ್ಟ್ನಲ್ಲಿ ಇರಬೇಕೋ ಬೇಡವೋ ಅನ್ನೋದು ನಿರ್ಧಾರವಾಗಲಿದೆ. ಬಹುತೇಕ ಇಂದೇ ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಅಂತ್ಯವಾಗುತ್ತದೆ ಎನ್ನಲಾಗಿದ್ದು, ಸಿಎಂ ಕುಮಾರಸ್ವಾಮಿ ಭಾಷಣಕ್ಕಾಗಿ ಶಾಸಕರು ಎದುರು ನೋಡುತ್ತಿದ್ದಾರೆ.