ETV Bharat / city

ವೃತ್ತಿಗೆ ಕಂಟಕ ತಂದ ಹುಟ್ಟುಹಬ್ಬ.. ಬಡ್ತಿ ಪಡೆದ 10 ದಿನದಲ್ಲೇ ಇನ್ಸ್​ಪೆಕ್ಟರ್​ ಸಸ್ಪೆಂಡ್! - Director General of Police Praveen Sood

ಠಾಣೆಯೊಳಗೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಪ ಎದುರಿಸುತ್ತಿರುವ ಇನ್ಸ್​ಪೆಕ್ಟರ್​​ ರಾಜು ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ‌.

ಅಮಾನತುಗೊಂಡ ಇನ್ಸ್​ಪೆಕ್ಟರ್
ಅಮಾನತುಗೊಂಡ ಇನ್ಸ್​ಪೆಕ್ಟರ್
author img

By

Published : Jun 9, 2021, 8:52 PM IST

Updated : Jun 10, 2021, 3:32 PM IST

ಬೆಂಗಳೂರು: ಲಾಕ್​ಡೌನ್ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಪಿಎಸ್ಐಯಿಂದ ಇನ್ಸ್​ಪೆಕ್ಟರ್​ ಆಗಿ ಬಡ್ತಿ ಪಡೆದಿದ್ದ ರಾಜು ಅವರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಇಲಾಖಾ ತನಿಖೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಹೊಸಕೋಟೆ ಟೌನ್ ಪೊಲೀಸ್ ಠಾಣೆಯಲ್ಲಿ ರಾಜು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಬ್​ ಇನ್​ಸ್ಪೆಕ್ಟರ್ ಹುದ್ದೆಯಿಂದ ಇನ್‌ಸ್ಪೆಕ್ಟರ್ ಆಗಿ ಇವರು ಬಡ್ತಿ ಪಡೆದಿದ್ದರು.

ಅಮಾನತಿಗೆ ಕಾರಣ ಏನು?

ಇನ್ಸ್​ಪೆಕ್ಟರ್​ ರಾಜು ಜೂನ್​ 1ರಂದು ಠಾಣೆಯೊಳಗೆ ಠಾಣಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು‌. ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಭ್ರಮದ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿಯಾಗಿದ್ದ ರವಿ ಚೆನ್ನಣ್ಣನವರ್ ತನಿಖೆ ನಡೆಸಿ ವರದಿ ನೀಡಿದ್ದರು.

ಇನ್ಸ್​​ಪೆಕ್ಟರ್​ ರಾಜು ಸಸ್ಪೆಂಡ್​:

ಲಾಕ್​ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಪಾರ್ಟಿ ಮಾಡಿದ್ದ ವಿಚಾರವಾಗಿ ರವಿ ಚೆನ್ನಣ್ಣನವರ್​​ ನೀಡಿದ್ದ ವರದಿ ಆಧರಿಸಿ ಪ್ರವೀಣ್ ಸೂದ್ ಅವರು ಇನ್ಸ್‌ಪೆಕ್ಟರ್ ರಾಜು ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಇನ್ಸ್‌ಪೆಕ್ಟರ್ ರಾಜು ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ KEDA ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಅಮಾನತು ಆಗಿರುವ ಇನ್ಸ್​ಪೆಕ್ಟರ್​​ ರಾಜು ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

Last Updated : Jun 10, 2021, 3:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.