ETV Bharat / city

ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ತಪಾಸಣೆ ಇನ್ನಷ್ಟು ಚುರುಕು.. ವಾಹನ ಸವಾರರೇ ಎಚ್ಚರ! - motor vehicle rule violations

ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಜೊತೆ-ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಇತಿಶ್ರೀ ಹಾಕಲು ಇತ್ತೀಚೆಗಷ್ಟೇ ಕೇಂದ್ರ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿದೆ. ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯ ತಪಾಸಣೆಯನ್ನು ಕಟ್ಟುನಿಟ್ಟು ಮಾಡಿರುವ ಸಾರಿಗೆ ಇಲಾಖೆ, ಇದೀಗ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ವಾಹನಗಳ ತಪಾಸಣೆ ಮತ್ತಷ್ಟು ಚುರುಕು ಪಡೆದಿದೆ.

Inspection of motor vehicle rule violations
ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ ತಪಾಸಣೆ ಇನ್ನಷ್ಟು ಚುರುಕು..ವಾಹನ ಸವಾರರೇ ಎಚ್ಚರ!
author img

By

Published : Nov 5, 2020, 2:05 PM IST

ಬೆಂಗಳೂರು: ನಿಮ್ಮ ವಾಹನ ಶಬ್ದ ಮಾಲಿನ್ಯ ಮಾಡುತ್ತಿದೆಯಾ, ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆಯಾ ಅಥವಾ ಹೆಲ್ಮೆಟ್ ಹಾಕದೇ ಸಂಚಾರ ಮಾಡುತ್ತಿದ್ದೀರಾ, ಆಟೋ ರಿಕ್ಷಾದ ಮೇಲೆ ಜಾಹೀರಾತು ಪ್ರದರ್ಶಿಸುತ್ತಿದ್ದೀರಾ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನೀವು ತಂಡ ಕಟ್ಟಲು ತಯಾರಾಗಬೇಕಾಗುತ್ತದೆ.

ಹೌದು, ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯ ತಪಾಸಣೆಯನ್ನು ಕಟ್ಟುನಿಟ್ಟು ಮಾಡಿರುವ ಸಾರಿಗೆ ಇಲಾಖೆ, ಇದೀಗ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇಂದಿನಿಂದಲೇ ಈ ತನಿಖಾ ತಂಡದವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಲ್ಲಿ ವರದಿ ಮಾಡಿಕೊಂಡು ಅಗತ್ಯ ಸಿಬ್ಬಂದಿಯ ಸಹಾಯದೊಂದಿಗೆ ತಪಾಸಣೆ ಆರಂಭಿಸಿ ಪ್ರಕರಣ ದಾಖಲಿಸಲಿದ್ದಾರೆ.

ಪ್ರಮುಖವಾಗಿ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟುಮಾಡುವ ವಾಹನಗಳು, ಕರ್ಕಶ ಶಬ್ದಮಾಡುವ ವಾಹನಗಳು, ಅನಧಿಕೃತವಾಗಿ ಸಂಚರಿಸುವ ಮ್ಯಾಕ್ಸಿಕ್ಯಾಬ್, ಮಜಲು ವಾಹನ, ಒಪ್ಪಂದ ವಾಹನಗಳು, ಆಟೋ ರಿಕ್ಷಾ ಮತ್ತು ವಾಹನಗಳ ಮೇಲೆ ಅನಧಿಕೃತ ಜಾಹೀರಾತು ಪ್ರದರ್ಶಿಸುವ ವಾಹನಗಳು, ಹೆಲ್ಮೆಟ್ ಧರಿಸದೇ ಸಂಚರಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ತನಿಖಾ ತಂಡ ಕ್ರಮ ಕೈಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.