ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ನನ್ನು 14 ದಿನಗಳ ನ್ಯಾಯಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಸಿಟಿ ಸಿವಿಲ್ ನ್ಯಾಯಲಯ ಆವರಣದ 1ನೇ ಸಿಸಿಹೆಚ್ ನ್ಯಾಯಾಲಕ್ಕೆ ಮನ್ಸೂರ್ ಖಾನ್ನನ್ನು ಇಂದು ಹಾಜರು ಪಡಿಸಲಾಗಿತ್ತು. ಈ ವೇಳೆ ಮನ್ಸೂರ್ ಖಾನ್ ಪರ ವಾದ ಮಂಡಿಸಿದ ವಕೀಲ ಸಿ ಕೆ ನಂದಕುಮಾರ್, ಆರೋಪಿಗೆ ತೀವ್ರ ಎದೆ ನೋವಿದೆ.
ಆಂಜಿಯೋಪ್ಲ್ಯಾಸ್ಟಿ, ಆಂಜಿಯೋಗ್ರಾಂ ಮಾಡಿಸಲಾಗಿದೆ. ಅಕ್ಯೂಟ್ ಕೊರೊನರಿ ಸಿಂಡ್ರೋಮ್ ಕಾಯಿಲೆಯಿಂದ ಆರೋಪಿ ಬಳಲುತ್ತಿದ್ದಾನೆ. ಆದ ಕಾರಣ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕೋರ್ಟ್ ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಇದಕ್ಕೆ ಇಡಿ ಪರ ಹಾಗೂ ಎಸ್ ಐಟಿ ಪರ ವಕೀಲರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಬೇಡ ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು. ಹೀಗಾಗಿ 14 ದಿನ ನ್ಯಾಯಂಗ ಬಂಧನಕ್ಕೆ ನೀಡಿ ಹಾಗೂ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆಗೆ ಅವಕಾಶ ನೀಡಿ ಎಂದು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಇನ್ನು ಮನ್ಸೂರ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾದ ಹಿನ್ನೆಲೆ ಎಸ್ಐಟಿ ನಾಳೆ ಅಥವಾ ನಾಡಿದ್ದು ಬಾಡಿ ವಾರೆಂಟ್ ಮೂಲಕ ಆತನನ್ನು ವಶಪಡಿಸುವ ಸಾಧ್ಯತೆ ಇದೆ.