ETV Bharat / city

ಬೇರೆ ರಾಜ್ಯದವರನ್ನು ಕಳ್ಳ ಮಾರ್ಗದಿಂದ ಬರಲು ಬಿಡಬೇಡಿ: ಸಿಎಂ ಖಡಕ್​​ ಸೂಚನೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಬಗ್ಗೆ ವಿಡಿಯೋ ಸಂವಾದ ನಡೆಸಿದ ಸಿಎಂ ಬಿಎಸ್​ವೈ, ಬೇರೆ ರಾಜ್ಯಗಳಿಂದ ಕಳ್ಳ ಮಾರ್ಗದಿಂದ ಬಂದೋರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

author img

By

Published : May 22, 2020, 4:33 PM IST

Identify those who have come into the state from a thief way: CM BSY
ವಿಡಿಯೋ ಸಂವಾದದಲ್ಲಿ ಸಿಎಂ

ಬೆಂಗಳೂರು: ಮಹಾರಾಷ್ಟ್ರ, ತಮಿಳುನಾಡು, ಗುಜರಾತ್​ಗಳಿಂದ ಕಳ್ಳ ಮಾರ್ಗದಲ್ಲಿ ಬರುವವರಿಗೆ ಪ್ರವೇಶ ನೀಡಬೇಡಿ ಎಂದು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ‌.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದದ ಮೂಲಕ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಉಪಸ್ಥಿತಿಯಲ್ಲಿ ಅಲ್ಲಿನ ಜಿಲ್ಲಾಡಳಿತ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಜೊತೆ ಸಿಎಂ ಸಮಾಲೋಚನೆ ನಡೆಸಿದರು.

ಮಹಾರಾಷ್ಟ್ರದಿಂದ ಬಂದವರಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಕ್ವಾರಂಟೈನ್ ವ್ಯವಸ್ಥೆ, ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಮಾತುಕತೆ ನಡೆಸಿದರು.

ನಂತರ ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಗಡಿಗಳು ಬಂದ್ ಮಾಡಲಾಗಿದೆ. ಆದರೆ, ಈ ರಾಜ್ಯಗಳಿಂದ ಕಳ್ಳ ಮಾರ್ಗಗಳಿಂದ ಬರುವವರ ಮೇಲೆ ನಿಗಾ ಇರಲಿ. ಈಗಾಗಲೇ ಕಳ್ಳ ಮಾರ್ಗದಲ್ಲಿ ಚಿಕ್ಕಬಳ್ಳಾಪುರ, ಮಂಡ್ಯ ಎರಡೂ ಜಿಲ್ಲೆಗಳಿಗೂ ಬಂದಿರುವವರನ್ನು ಪತ್ತೆ ಹಚ್ಚಿ. ಬೇರೆ ರಾಜ್ಯಗಳಿಂದ ಕಳ್ಳ ಮಾರ್ಗದಿಂದ ಬಂದೋರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ ಎಂದು ಸಿಎಂ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.

ವಿಡಿಯೋ ಸಂವಾದದಲ್ಲಿ ಸಿಎಂ

ಕದ್ದು ಮುಚ್ಚಿ ಬರೋದಕ್ಕೆ ಅವಕಾಶ ಕೊಡದಂತೆ ತಾಕೀತು ಮಾಡಿದ ಸಿಎಂ, ಸದ್ಯ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿ ಇತ್ತು. ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮಹಾರಾಷ್ಟ್ರದಿಂದ ಬರುವವರನ್ನು ಸದ್ಯ ಸ್ಟಾಪ್ ಮಾಡಲಾಗಿದೆ. ಆದರೆ ಕಳ್ಳ ಮಾರ್ಗದಿಂದ ಬಂದಿರೋರಿಂದಲೂ ಸೋಂಕು ಹಬ್ಬುವ ಸಾಧ್ಯತೆ ಇದೆ. ಎಚ್ಚರ ವಹಿಸಿ ಎಂದು ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.