ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆಗೆ ನಡೆಸುತ್ತಿದ್ದ ಮಹಿಳೆಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಜ್ಯೋತಿ(47) ಬಂಧಿತ ಆರೋಪಿ.
ಆರೋಪಿ ಜ್ಯೋತಿಯು ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳ ಮೂಲದ ಯುವತಿಯರನ್ನು ಅಕ್ರಮವಾಗಿ ರವಾನೆ ಮಾಡಿಕೊಂಡು, ಇಲ್ಲಿನ ಹಲವೆಡೆ ವೇಶ್ಯಾವಾಟಿಕೆ ನಡೆಸುತ್ತಿದ್ದರು. ತಮ್ಮ ಪರಿಚಿತ ಯುವಕರ ಮೂಲಕ ಗ್ರಾಹಕರನ್ನು ಹುಡುಕಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಎಂ ಎಂ ನರವಾಣೆ ಅಧಿಕಾರ ಸ್ವೀಕಾರ
ಭದ್ರಪ್ಪ ಲೇಔಟ್‌ನ ಲಾಡ್ಜ್‌ವೊಂದರಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಎನ್‌ಜಿಒ ಸಂಸ್ಥೆಯೊಂದು ಕೊಡಿಗೆಹಳ್ಳಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿತ್ತು. ಪೊಲೀಸರು ಲಾಡ್ಜ್ ಮೇಳೆ ದಾಳಿ ಮಾಡಿ ಜ್ಯೋತಿಯನ್ನು ಬಂಧಿಸಿ, ಇಬ್ಬರು ಸಂತ್ರಸ್ತ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.