ETV Bharat / city

ಇಂಜೆಕ್ಷನ್ ತೆಗೆದುಕೊಂಡು ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ: ಸಾವಿನ ಬಗ್ಗೆ ಕುಟುಂಬಸ್ಥರ ಸಂಶಯ

ನೆಲಮಂಗಲದ ಸ್ವಾಸ್ಥ್ಯ ಎಂಬ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೋರ್ವ ಅರಿವಳಿಕೆ ಇಂಜೆಕ್ಷನ್ ತೆಗೆದುಕೊಂಡು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Hospital staff committed suicide by injecting anesthesia

author img

By

Published : Oct 4, 2021, 10:17 AM IST

ನೆಲಮಂಗಲ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವ ಅರಿವಳಿಕೆ ಇಂಜೆಕ್ಷನ್ ತೆಗೆದುಕೊಂಡು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಅನುಮಾನಾಸ್ಪದ ಸಾವಿನ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇಂಜೆಕ್ಷನ್ ತೆಗೆದುಕೊಂಡು ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ

ನೆಲಮಂಗಲದ ಸ್ವಾಸ್ಥ್ಯ ಎಂಬ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯ ವಿಶ್ರಾಂತಿ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರಿನ ಕಡೂರು ಮೂಲದ ಸಂಜಯ್ (19) ಅರಿವಳಿಕೆ ಇಂಜೆಕ್ಷನ್ ತೆಗೆದುಕೊಂಡು ಪ್ರಾಣ ಬಿಟ್ಟ ವ್ಯಕ್ತಿ. ಆಪರೇಷನ್ ಥಿಯೇಟರ್​ನಲ್ಲಿ ಕೆಲಸ ನಿರ್ವಹಣೆ ಮಾಡ್ತಿದ್ದ ಸಂಜಯ್ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದವನು ಬಹಳ ಸಮಯವಾದರೂ ಮೇಲೇಳದೆ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಗಂಗಾವತಿ : ಕಾಂಗ್ರೆಸ್ ಮುಖಂಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಬಿಜೆಪಿ ಲೀಡರ್

ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿರುವ ಸಂಜಯ್ ಕೋವಿಡ್​​ ಲಾಕ್​ಡೌನ್​ಗೂ ಮುನ್ನ 6 ತಿಂಗಳು ಓಟಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಹಾಕಿ ಊರಿಗೆ ತೆರಳಿದ್ದ ಆತ ಲಾಕ್​ಡೌನ್ ತೆರವು ಬಳಿಕ ಮತ್ತೆ ಆಸ್ಪತ್ರೆಗೆ ಬಂದು ಕೆಲಸಕ್ಕೆ ಹಾಜರಾಗಿದ್ದರು.

ಇಂದು ಮುಂಜಾನೆ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಸಂಜಯ್​ ಮೂಗಿನಿಂದ ರಕ್ತ ಬಂದು ಮುಖವೆಲ್ಲಾ ಆವಸಿದ್ದನ್ನು, ಪಕ್ಕದಲ್ಲೇ ಸಿರಿಂಜ್ ಬಿದ್ದಿದ್ದನ್ನು ಆಸ್ಪತ್ರೆ ಸಿಬ್ಬಂದಿ ನೋಡಿದ್ದಾರೆ. ವಿಷಯ ತಿಳಿದ ಮೃತನ ಪೋಷಕರು, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.