ETV Bharat / city

ತಾಕತ್ತು ಎಲ್ಲರಿಗೂ ಇದೆ, ಅದನ್ನು ಈಗ ಪ್ರದರ್ಶಿಸುವುದು ಬೇಡ: ಗೃಹ ಸಚಿವ ಆರಗ ಜ್ಞಾನೇಂದ್ರ - Home Minister's statement on Congress rally

ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಆದರೆ, ರಾಜ್ಯದಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿ ಇರುವ ಕಾರಣ ಕೊರೊನಾನ ನಿರ್ಬಂಧಗಳನ್ನು ಹೇರಲಾಗಿದೆ. ಅದು ಕಾಂಗ್ರೆಸ್​ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷ, ಜನರಿಗೆ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು.

jnanendra
ಜ್ಞಾನೇಂದ್ರ
author img

By

Published : Jan 6, 2022, 3:01 PM IST

Updated : Jan 6, 2022, 3:45 PM IST

ಬೆಂಗಳೂರು: ಕೊರೊನಾದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಲಖನೌ ಭೇಟಿ, ನಾಳೆ ರಾಜ್ಯದಲ್ಲಿ ನಡೆಯಬೇಕಿದ್ದ ಬಿಜೆಪಿ ಚಿಂತನಾ ಸಭೆಯನ್ನೂ ರದ್ದು ಮಾಡಲಾಗಿದೆ. ಕೊರೊನಾ ಮಧ್ಯೆಯೂ ಕಾಂಗ್ರೆಸ್​ ಪಾದಯಾತ್ರೆ ಮಾಡುತ್ತೇವೆ ಎಂದು ಮೊಂಡು ವಾದ ಮಂಡಿಸಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಈ ವೇಳೆ ಹೇಗೆ ವರ್ತಿಸಬೇಕು ಎಂಬುದು ತಿಳಿದಿರಬೇಕು. ಕಾಂಗ್ರೆಸ್​ ಈ ಹಿಂದೆ 6 ವರ್ಷ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆ ಜಾರಿ ಮಾಡಲಿಲ್ಲ. ಈಗ ನೀರಿಗಾಗಿ ನಡಿಗೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.

ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಆದರೆ, ರಾಜ್ಯದಲ್ಲಿ ಕೊರೊನಾ ಸಂಧಿಗ್ಧ ಪರಿಸ್ಥಿತಿ ಇರುವ ಕಾರಣ ಕೊರೊನಾನ ನಿರ್ಬಂಧಗಳನ್ನು ಹೇರಲಾಗಿದೆ. ಅದು ಕಾಂಗ್ರೆಸ್​ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷ, ಜನರಿಗೆ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್​ನವರು ಹೇಗೆ ಬೇಕಾದರೂ ನಡೆದುಕೊಳ್ಳಲಿ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಮುಂದೆ ಅವರೇ ಬುದ್ದಿ ಕಲಿಸುತ್ತಾರೆ. ತಾಕತ್ತು ಬಗ್ಗೆ ಪ್ರಶ್ನೆ ಬೇಡ. ತಾಕತ್ತು ಎಲ್ಲರಿಗೂ ಇರುತ್ತದೆ. ಅದನ್ನು ಈಗ ಪ್ರದರ್ಶನ ಮಾಡುವುದು ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಡಿ.ಕೆ.ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Watch... ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ, ತಾಕತ್​ ಇದ್ದರೆ ಬಂಧಿಸಲಿ: ಡಿಕೆಶಿ ಗುಡುಗು

Last Updated : Jan 6, 2022, 3:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.