ಸಿಎಂ ಬೊಮ್ಮಾಯಿ ಮಂಡಿಸಿದ ಮೊದಲ ಬಜೆಟ್ ಅನ್ನು 'ಪ್ರಗತಿಯ ಮುನ್ನೋಟ'ವೆಂದೇ ಬಿಂಬಿಸಲಾಗಿದೆ. ತಮ್ಮ ಚೊಚ್ಚಲ ಬಜೆಟ್ ಮೂಲಕ ಅವರು ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
- ಮೇಕೆದಾಟು ಯೋಜನೆಗೆ ₹1,000 ಕೋಟಿ ಅನುದಾನ
- ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹20 ಕೋಟಿ ಅನುದಾನ
- ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಘೋಷಣೆ
- ರಾಜ್ಯ ಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ನಡೆಸಲು ಅಸ್ತು
- ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ ₹56,710 ಕೋಟಿ ಅನುದಾನ
- ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳಲ್ಲಿ 438 'ನಮ್ಮ ಕ್ಲಿನಿಕ್'ಗಳ ಸ್ಥಾಪನೆ
- ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ
- ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ: ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ
- ‘ರೈತ ಶಕ್ತಿ’ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ ₹250ರಂತೆ ಡೀಸೆಲ್ ಸಹಾಯಧನ: ₹600 ಕೋಟಿ ಅನುದಾನ
- ಮಕ್ಕಳ ಅಭ್ಯುದಯಕ್ಕೆ ₹40,944 ಕೋಟಿ ಘೋಷಣೆ
- ಮಹಿಳೆಯರ ಅಭಿವೃದ್ಧಿಗೆ ₹43,188 ಕೋಟಿ ಘೋಷಣೆ
- ರಾಜ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಹೆಚ್ಚಳ
- ಕೃಷಿ ಕ್ಷೇತ್ರಕ್ಕೆ ₹33,700 ಕೋಟಿ ಘೋಷಣೆ
- ಬೆಂಗಳೂರು ಅಭಿವೃದ್ಧಿಗೆ ₹8,409 ಕೋಟಿ ಕೊಡುಗೆ
- 2022–23ನೇ ಸಾಲಿನ ಬಜೆಟ್ ಗಾತ್ರ ₹2,65,720 ಕೋಟಿ
ಇದನ್ನೂ ಓದಿ: ಕಾಶಿಯಾತ್ರೆಗೆ 5 ಸಾವಿರ ರೂ ಸಹಾಯಧನ; ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿಗೆ ವಿಶೇಷ ಪ್ಯಾಕೇಜ್ ಟ್ರಿಪ್