ETV Bharat / city

12 ವರ್ಷಗಳಿಂದ ಗೌರವಯುತ ಜೀವನ: ವ್ಯಕ್ತಿಯನ್ನು ರೌಡಿಶೀಟರ್​​ ಪಟ್ಟಿಯಿಂದ ಕೈಬಿಡುವಂತೆ ಹೈಕೋರ್ಟ್ ಆದೇಶ - ಬಂಟ್ವಾಳ ಪಟ್ಟಣದ ನಿವಾಸಿ ರವಿರಾಜ್ ನ್ಯೂಸ್​

ಬಂಟ್ವಾಳ ಪಟ್ಟಣದ ನಿವಾಸಿ ರವಿರಾಜ್, ತಮ್ಮನ್ನು ರೌಡಿ ಶೀಟರ್​​ ಪಟ್ಟಿಯಿಂದ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ನ್ಯಾ. ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

High Court
ಹೈಕೋರ್ಟ್
author img

By

Published : Mar 16, 2020, 11:26 PM IST

ಬೆಂಗಳೂರು: ಕಳೆದ 12 ವರ್ಷಗಳಿಂದ ಯಾವುದೇ ಗದ್ದಲವಿಲ್ಲದೆ ಕುಟುಂಬದೊಂದಿಗೆ ಗೌರವಯುತವಾಗಿ ಜೀವಿಸುತ್ತಿದ್ದರೂ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡದ ಪೊಲೀಸರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್,​ ಕೂಡಲೇ ಆ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡುವಂತೆ ಆದೇಶಿಸಿದೆ.

ಬಂಟ್ವಾಳ ಪಟ್ಟಣದ ನಿವಾಸಿ ರವಿರಾಜ್, ತಮ್ಮನ್ನು ರೌಡಿ ಶೀಟರ್​​ ಪಟ್ಟಿಯಿಂದ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ನ್ಯಾ. ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದಿಸಿ, ತಮ್ಮ ಕಕ್ಷಿದಾರರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಕ್ರಿಯರಾಗಿದ್ದರು. ಹೀಗಾಗಿಯೇ ರಾಜಕೀಯ ದುರುದ್ದೇಶದಿಂದ ಇವರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ರವಿರಾಜ್ ವಿರುದ್ಧ ಪೊಲೀಸರು ದಾಖಲಿಸಿದ್ದ ಎಲ್ಲಾ ಪ್ರಕರಣಗಳಲ್ಲೂ ಅವರು ನಿರ್ದೋಷಿ ಎಂದು ತೀರ್ಪು ಬಂದಿದೆ. ಹಾಗೆಯೇ ಕಳೆದ 12 ವರ್ಷಗಳಿಂದ ಅವರು ಕುಟುಂಬದೊಂದಿಗೆ ಗೌರವಯುತವಾಗಿ ಜೀವನ ನಡೆಸುತ್ತಿದ್ದಾರೆ. ಆದರೂ ರೌಡಿ ಪಟ್ಟಿಯಲ್ಲಿ ರವಿರಾಜ್ ಹೆಸರಿದ್ದು, ಚುನಾವಣೆ ಸಂದರ್ಭಗಳಲ್ಲಿ ಬಾಂಡ್ ನೀಡುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ. ಪೊಲೀಸ್ ನಿಯಮಗಳ ಪ್ರಕಾರ ಪ್ರತಿ ವರ್ಷವೂ ರೌಡಿ ಶೀಟರ್​ಗಳ ಪಟ್ಟಿಯನ್ನು ಉತ್ತಮ ನಡತೆ ಆಧಾರದಲ್ಲಿ ಪರಿಷ್ಕರಣೆ ಮಾಡಿ ಅರ್ಹರನ್ನು ಪಟ್ಟಿಯಿಂದ ಕೈಬಿಡಬೇಕು. ಆದರೆ ಪೊಲೀಸರು ಪಟ್ಟಿಯನ್ನೇ ಪರಿಷ್ಕರಿಸಿಲ್ಲ. ಹೀಗಾಗಿ ರವಿರಾಜ್ ಅವರನ್ನು ರೌಡಿ ಪಟ್ಟಿಯಿಂದ ಕೈಬಿಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ವಾದ ಮಾನ್ಯ ಮಾಡಿದ ಪೀಠ, ರವಿರಾಜ್ ವಿರುದ್ಧ ಬಂಟ್ವಾಳ ಪೊಲೀಸರು ದಾಖಲಿಸಿರುವ ರೌಡಿ ಶೀಟರ್‌ ತೆರವು ಮಾಡುವಂತೆ ಬಂಟ್ವಾಳ ಉಪ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿತು. ಅಲ್ಲದೇ, ಪಟ್ಟಿಯಿಂದ ಅರ್ಜಿದಾರರ ಹೆಸರನ್ನು ತೆಗೆದು ಹಾಕಿದ್ದಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2006ರಲ್ಲಿ ಬಂಟ್ವಾಳ ಪಟ್ಟಣದಲ್ಲಿ ಕೋಮುಗಲಭೆ ನಡೆದಾಗ ಜೆರಾಕ್ಸ್ ಮತ್ತು ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿರುವ ರವಿರಾಜ್ ಅಂಗಡಿ ಮೇಲೆ ದಾಳಿ ನಡೆದಿತ್ತು. ಈ ವೇಳೆ ರವಿರಾಜ್ ಮೇಲೂ ಪ್ರಕರಣ ದಾಖಲಿಸಲಾಗಿತ್ತು. ತದ ನಂತರದಲ್ಲಿ ದಾಖಲಿಸಿದ ಪ್ರಕರಣಗಳು ಸೇರಿ 2008ರವರೆಗೆ ಒಟ್ಟು 6 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿದ್ದ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯ, ಆರೋಪಿಯನ್ನು ಖುಲಾಸೆ ಮಾಡಿ ತೀರ್ಪು ನೀಡಿದೆ. ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದ ಬಳಿಕವೂ ಪೊಲೀಸರು ರೌಡಿ ಶೀಟರ್ ಪಟ್ಟಿಯಲ್ಲಿ ಹೆಸರು ತೆಗೆದಿರಲಿಲ್ಲ. ಬದಲಿಗೆ ಪ್ರತಿ ಚುನಾವಣೆ ಸಂದರ್ಭದಲ್ಲೂ ಬಾಂಡ್ ನೀಡುವಂತೆ ಒತ್ತಾಯಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ರವಿರಾಜ್ ತಾವು 2008ರಿಂದ ಈವರೆಗೆ ಯಾವುದೇ ಗದ್ದಲ ಗಲಾಟೆಗಳಲ್ಲಿ ಭಾಗಿಯಾಗಿಲ್ಲ. ಕಳೆದ 12 ವರ್ಷಗಳಿಂದ ಗೌರವಯುತವಾಗಿ ಜೀವಿಸುತ್ತಿರುವ ತಮ್ಮನ್ನು ರೌಡಿ ಪಟ್ಟಿಯಿಂದ ಬಿಡುಗಡೆ ಮಾಡಬೇಕು ಎಂದು ಕೋರಿ 2019ರ ಏಪ್ರಿಲ್ 25ರಂದು ಮತ್ತು 2020ರ ಜನವರಿ 22ರಂದು ಎರಡು ಬಾರಿ ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ ಪೊಲೀಸರು ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.