ETV Bharat / city

ಹೈಕೋರ್ಟ್ ತಳಮಹಡಿ ಕಚೇರಿ ಸ್ಥಳಾಂತರಕ್ಕೆ KGID ಕಟ್ಟಡ ನೀಡುವಂತೆ ಸರ್ಕಾರಕ್ಕೆ ಮನವಿ - High Court news

ನ್ಯಾಯಾಲಯದ ಹಿಂದಿನ ಆದೇಶದಂತೆ ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಸರ್ಕಾರ ಹೈಕೋರ್ಟ್‌ಗೆ ನೀಡಿದೆ. ಜತೆಗೆ, ಹೆಚ್ಚಿನ ಸ್ಥಳಾವಕಾಶ ನೀಡುವ ಭರವಸೆ ನೀಡಿತ್ತು. ಆದ್ದರಿಂದ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ಕೆಜಿಐಡಿ ಕಟ್ಟಡಗಳನ್ನು ಹೈಕೋರ್ಟ್‌ಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಕೋರುತ್ತಿದೆ. ವಿಶೇಷವಾಗಿ ಸ್ಥಳಾವಕಾಶದ ಸಮಸ್ಯೆ ಪರಿಗಣಿಸಿ ಸರ್ಕಾರ ನಿರ್ಧಾರ ಮಾಡಬೇಕು ಎಂದು ಮನವಿ ಮಾಡಿತು.

ಹೈಕೋರ್ಟ್
ಹೈಕೋರ್ಟ್
author img

By

Published : Nov 17, 2021, 8:06 PM IST

ಬೆಂಗಳೂರು: ನಗರದ ಹೈಕೋರ್ಟ್ ಕಟ್ಟಡದ ತಳಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ಕಬ್ಬನ್‌ ಪಾರ್ಕ್​​ನಲ್ಲಿರುವ ಚುನಾವಣಾ ಆಯೋಗದ (Election Commission) ಹಳೆಯ ಕಟ್ಟಡ ಮತ್ತು ಕರ್ನಾಟಕ ರಾಜ್ಯ ವಿಮಾ ಇಲಾಖೆಯ ಕಟ್ಟಡವನ್ನು (KGID) ತಮಗೆ ನೀಡುವ ಕುರಿತು ಪರಿಶೀಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮನವಿ ಮಾಡಿದೆ.

ಹೈಕೋರ್ಟ್ ಕಟ್ಟಡದ ತಳ ಮಹಡಿಯಲ್ಲಿರುವ ಎಲ್ಲ ಕಚೇರಿಗಳನ್ನು ಅಲ್ಲಿಂದ ತೆರವುಗೊಳಿಸಲು ನಿರ್ದೇಶನ ಕೋರಿ ವಕೀಲ ರಮೇಶ್ ನಾಯ್ಕ್ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಮನವಿ ಮಾಡಿದೆ.

ವಿಚಾರಣೆ ವೇಳೆ ಹೈಕೋರ್ಟ್ ಪರ ವಾದಿಸಿದ ವಕೀಲ ಎಸ್.ಎಸ್.ನಾಗಾನಂದ್, ಹೈಕೋರ್ಟಿನ ಕೆಲ ಕಚೇರಿಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಕಟ್ಟಡದ ಎರಡು ಕೊಠಡಿಗಳನ್ನು ಸರ್ಕಾರ ಈಗಾಗಲೇ ನೀಡಿದೆ. ಇಂಧನ ಭವನದಲ್ಲಿಯೂ ಜಾಗ ನೀಡುವುದಾಗಿ ತಿಳಿಸಿದೆ. ಆದರೆ, ಇಂಧನ ಭವನ ನಿರ್ಮಾಣ ಹಂತದಲ್ಲಿದ್ದು, ಅಲ್ಲಿ ಜಾಗ ನೀಡಲು ವರ್ಷಗಳೇ ಬೇಕಾಗಬಹುದು. ಹೀಗಾಗಿ, ಹೈಕೋರ್ಟ್ ಸಮೀಪದಲ್ಲಿರುವ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ಕೆಜಿಐಡಿ ಕಟ್ಟಡವನ್ನು ಹೈಕೋರ್ಟ್‌ಗೆ ಹಸ್ತಾಂತರಿಸಿದರೆ ತಕ್ಷಣವೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಹೇಳಿಕೆ ಪರಿಗಣಿಸಿದ ಪೀಠ, ನ್ಯಾಯಾಲಯದ ಹಿಂದಿನ ಆದೇಶದಂತೆ ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಸರ್ಕಾರ ಹೈಕೋರ್ಟ್‌ ಗೆ ನೀಡಿದೆ. ಜತೆಗೆ, ಹೆಚ್ಚಿನ ಸ್ಥಳಾವಕಾಶ ನೀಡುವ ಭರವಸೆ ನೀಡಿತ್ತು. ಆದ್ದರಿಂದ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ಕೆಜಿಐಡಿ ಕಟ್ಟಡಗಳನ್ನು ಹೈಕೋರ್ಟ್‌ಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಕೋರುತ್ತಿದೆ. ವಿಶೇಷವಾಗಿ ಸ್ಥಳಾವಕಾಶದ ಸಮಸ್ಯೆ ಪರಿಗಣಿಸಿ ಸರ್ಕಾರ ನಿರ್ಧಾರ ಮಾಡಬೇಕು ಎಂದು ಮನವಿ ಮಾಡಿತು.

ಅಲ್ಲದೆ, ಹೈಕೋರ್ಟ್ ಕಟ್ಟಡದ ತಳ ಮಹಡಿಯ ಜಾಗವನ್ನು ಕಚೇರಿಗಳನ್ನಾಗಿ ಬಳಸುವುದು ಕಾನೂನಿಗೆ ವಿರುದ್ಧವಾಗಿದೆ. ಹೆಚ್ಚುವರಿ ಜಾಗ ಕಲ್ಪಿಸಿದರೆ ತಳಮಹಡಿಯ ಕಚೇರಿಗಳನ್ನು ಸ್ಥಳಾಂತರಿಸಬಹುದಾಗಿದೆ. ಆದ್ದರಿಂದ ಸರ್ಕಾರವು ಸಕಾರಾತ್ಮಕ ಉತ್ತರ ನೀಡಲಿದೆ ಎಂಬುದಾಗಿ ನ್ಯಾಯಾಲಯ ವಿಶ್ವಾಸ ಹೊಂದಿದೆ ಎಂದು ತಿಳಿಸಿ, ವಿಚಾರಣೆಯನ್ನು 2020ರ ಜ.6ಕ್ಕೆ ಮುಂದೂಡಿತು.

ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿ.30ರೊಳಗೆ ಚುನಾವಣೆ ನಡೆಸಲು ಹೈಕೋರ್ಟ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.