ETV Bharat / city

ಮಾಸ್ಕ್, ಸಮಾಜಿಕ ಅಂತರ, ಲಸಿಕಾಕರಣ ಮುಂದುವರೆಯಲಿದೆ : ಆರೊಗ್ಯ ಸಚಿವ ಸುಧಾಕರ್‌ - new covid rules

ನಿನ್ನೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದ್ದೇವೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಹೊರ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಇನ್ನೂ ರಾಜ್ಯದಲ್ಲಿ ಮಾಸ್ಕ್ ಫ್ರೀ ಮಾಡುವ ಆಲೋಚನೆ ನಮ್ಮ ಸರ್ಕಾರಕ್ಕೆ ಇಲ್ಲ. ತಾಂತ್ರಿಕ ಸಲಹಾ ಸಮಿತಿ ಕೂಡ ಮಾಸ್ಕ್ ಧರಿಸಬೇಕು ಎನ್ನುವ ಸಲಹೆ ನೀಡಿದೆ..

health minister dr sudhakar
ಸಚಿವ ಡಾ. ಸುಧಾಕರ್
author img

By

Published : Apr 12, 2022, 3:28 PM IST

ಬೆಂಗಳೂರು : ನಗರ ಸೇರಿದಂತೆ ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ಧರಿಸುವಿಕೆಗೆ ವಿನಾಯಿತಿ ನೀಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಮಾಸ್ಕ್, ಸಮಾಜಿಕ ಅಂತರ, ಲಸಿಕಾಕರಣ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾಲ್ಕನೇ ಅಲೆ ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕನೇ ಅಲೆಗೆ ರಾಜ್ಯ ಸಿದ್ಧವಾಗಿದೆ ಎಂದರು.

ಕೊರೊನಾ ಕುರತಂತೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕುರಿತಂತೆ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿರುವುದು..

ನಿನ್ನೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದ್ದೇವೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಹೊರ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಇನ್ನೂ ರಾಜ್ಯದಲ್ಲಿ ಮಾಸ್ಕ್ ಫ್ರೀ ಮಾಡುವ ಆಲೋಚನೆ ನಮ್ಮ ಸರ್ಕಾರಕ್ಕೆ ಇಲ್ಲ. ತಾಂತ್ರಿಕ ಸಲಹಾ ಸಮಿತಿ ಕೂಡ ಮಾಸ್ಕ್ ಧರಿಸಬೇಕು ಎನ್ನುವ ಸಲಹೆ ನೀಡಿದೆ. ನಾವಿನ್ನೂ ಕಠಿಣ ನಿಯಮ ಮಾಡಿಲ್ಲ. ಅಂತಹ ಪರಿಸ್ಥಿತಿ ಬಂದರೆ ನಿಯಮಗಳನ್ನು ಕಠಿಣಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಖಾಸಗಿ ಕಂಪನಿಗಳು ಲಸಿಕೆಗೆ ದರ ನಿಗದಿ ಮಾಡಿವೆ. ಮೊದಲಿದ್ದ ದರಕ್ಕಿಂತ ಕಡಿಮೆ ದರ ನಿಗದಿಪಡಿಸಿವೆ. ಸರ್ಕಾರ ಉಚಿತವಾಗಿ ಲಸಿಕೆ ನೀಡುವುದನ್ನು ಮುಂದುವರಿಸಲಿದೆ. ಅವಧಿ ಮುಗಿದ ಲಸಿಕೆಯನ್ನು ಕಂಪನಿಗಳಿಗೆ ವಾಪಸ್ ಕಳುಹಿಸಲಾಗುತ್ತದೆ ಎಂದರು. ಈವರೆಗೂ 185 ಕೋಟಿ 90 ಲಕ್ಷಕ್ಕೂ ಹೆಚ್ಚು ಡೋಸ್​ಗಳನ್ನು ನೀಡಲಾಗಿದೆ.

70 ವರ್ಷದ ದೇಶದ ಆಳ್ವಿಕೆಯಲ್ಲಿ ಆರೋಗ್ಯ ವ್ಯವಸ್ಥೆ ಸಮರ್ಥವಾಗಿರಲಿಲ್ಲ. ಕೇವಲ 2 ವರ್ಷದಲ್ಲಿ ಆರೋಗ್ಯ ವ್ಯವಸ್ಥೆಯನ್ನು ನಾಲ್ಕೈದು ಪಟ್ಟು ಹೆಚ್ಚಳ ಮಾಡಲು ನಮ್ಮ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿದೆ ಎಂದರು. ಕರ್ನಾಟಕದಲ್ಲಿ 10.54 ಕೋಟಿ ಡೋಸ್ ಲಸಿಕೆ ಕೊಡಲಾಗಿದೆ. ಶೇ.98ರಷ್ಟು ಎರಡನೇ ಡೋಸ್ ಲಸಿಕೆ ನೀಡಿಕೆ ಸಾಧ್ಯವಾಗಿದೆ. 32 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ ಎಂದರು.

ಇದನ್ನೂ ಓದಿ: ನನ್ನ ಮೇಲೆ ಆಪಾದನೆ ಮಾಡಿದವ್ರು ಕೋರ್ಟ್‌ನಲ್ಲೇ ಪ್ರೂವ್‌ ಮಾಡ್ಬೇಕಿತ್ತು.. ಆತ್ಮಹತ್ಯೆಗೂ ನನ್ಗೂ ಸಂಬಂಧ ಇಲ್ಲ.. ಈಶ್ವರಪ್ಪ

ಪ್ರಧಾನಿಯವರು ರಾಜ್ಯಕ್ಕೆ 243 ಆಮ್ಲಜನಕ ಪ್ಲಾಂಟ್ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ಪೈಕಿ 233 ಆರಂಭಗೊಂಡಿವೆ. ಬೇರೆ ದೇಶಕ್ಕೆ ಲಸಿಕೆ ಕೊಟ್ಟ ಕಾರಣ ಹಲವು ದೇಶಗಳು ನಮಗೆ ಆಕ್ಸಿಜನ್ ಕಳುಹಿಸಿಕೊಟ್ಟವು ಎಂದು ಹೇಳಿದರು. ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡಿದ್ದರು. ವಿರೋಧ ಪಕ್ಷದವರ ಟೀಕೆಯ ನಡುವೆಯೂ ನಮ್ಮ ಬದ್ಧತೆ ಬದಲಾಗಲಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಿದೆವು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.