ಬೆಂಗಳೂರು: ಸಿಎಎ ಎಂದು ಹೊಡೆದುಕೊಳ್ಳುತ್ತಿದ್ದವರ ಮುಂದೆ ಜನರ ಅವಶ್ಯಕಗಳನ್ನು ಪೂರೈಸಿದ ಆಪ್ ಪಕ್ಷ ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಹೋಗಿ ಗೆದ್ದಿತು ಎಂದು ಮಾಜಿ ಪ್ರಧಾನಿ ದೇವೇಗೌಡರು ದೆಹಲಿ ಫಲಿತಾಂಶವನ್ನ ವಿಶ್ಲೇಷಿಸಿದ್ದಾರೆ.
ದಿಲ್ಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಜ್ರಿವಾಲ್ ನಿರಂತರ ಹೋರಾಟದಿಂದ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಬಿಜೆಪಿ ಸಿಎಎ ಎಂದು ಹೊಡೆದಾಡಿದ್ರೆ, ಆಪ್ ಕುಡಿಯುವ ನೀರು, ಸಾರಿಗೆ, ಶಿಕ್ಷಣ ವ್ಯವಸ್ಥೆಯಂತಹ ಅಭಿವೃದ್ಧಿಯನ್ನ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿ ಗೆದ್ದಿದೆ.
ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು, ಪಕ್ಷದ ನಾಯಕರು, ಶಾಸಕರು, ಸಂಸದರನ್ನು ಒಗ್ಗೂಡಿಸಿ ಕೆಲಸ ಮಾಡುತ್ತೇನೆ. ನನ್ನ ಪಕ್ಷದ ಹಳೆಯ ನಾಯಕರು ಬೇರೆ ಬೇರೆ ಪಕ್ಷದಲ್ಲಿ ಇದ್ದಾರೆ. ಅವರನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.