ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು 2020 ಮತ್ತು 2021ನೇ ಸಾಲಿನ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇಂದು ನಡೆಯುವ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಯಾರಿಗೆ ಯಾವ ಪ್ರಶಸ್ತಿ:
2019ನೇ ಸಾಲಿನ 'ಹವ್ಯಕ ವಿಭೂಷಣ' ಪ್ರಶಸ್ತಿ ಶಿವಮೊಗ್ಗದ ಡಾ. ವಿದ್ವಾನ್ ಬಂದಗದ್ದೆ ನಾಗರಾಜ (ಸಾಹಿತ್ಯ) ಆಯ್ಕೆಯಾಗಿದ್ದಾರೆ. 'ಹವ್ಯಕ ಭೂಷಣ' ಪ್ರಶಸ್ತಿ ಉ.ಕದ ರಾಮಚಂದ್ರ ಹೆಗಡೆ ಕೊಂಡದಕುಳಿ (ಯಕ್ಷಗಾನ), ಮತ್ತು ದಕ್ಷಿಣ ಕನ್ನಡದ ಡಾ. ಶ್ಯಾಮ್. ಸಿ ಭಟ್ (ಸಂಶೋಧನೆ) ಪ್ರಶಸ್ತಿ ಲಭಿಸಿದೆ. ‘ಹವ್ಯಕ ಶ್ರೀ’ ಪ್ರಶಸ್ತಿಗೆ ಶಿವಮೊಗ್ಗದ ಗಜಾನನ ಘನಪಾಠಿ (ವೇದ), ದಕ್ಷಿಣ ಕನ್ನಡದ ತೇಜಸ್ವಿ ಶಂಕರ್ (ಮನೋರಂಜನೆ), ಉತ್ತರ ಕನ್ನಡದ ಗುರುಮೂರ್ತಿ ವೈದ್ಯ (ಸಂಗೀತ) ಆಯ್ಕೆಯಾಗಿದ್ದಾರೆ.
2020ನೇ ಸಾಲಿನ 'ಹವ್ಯಕ ವಿಭೂಷಣ' ಪ್ರಶಸ್ತಿ ಕಾಸರಗೋಡಿನ ಡಾ.ನಾ. ಮೊಗಸಾಲೆ(ಸಾಹಿತ್ಯ), 'ಹವ್ಯಕ ಭೂಷಣ' ಪ್ರಶಸ್ತಿ ಶಿವಮೊಗ್ಗದ ಡಾ. ಸುಬ್ಬರಾವ್(ವೈದ್ಯಕೀಯ), ಡಾ. ನಾಗರಾಜ ಹೆಗಡೆ (ಕೃಷಿ ಉಪಕರಣ / ಔಷಧಿ), ಹವ್ಯಕ ಶ್ರೀ ಪ್ರಶಸ್ತಿಗೆ ಉತ್ತರ ಕನ್ನಡದ ಚಂದ್ರಕಲಾ ಭಟ್ (ಸಮಾಜಸೇವೆ / ತಾಳಮದ್ದಳೆ), ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ (ಪರಿಸರ), ಇಶಾ ಕಾಂತಜೆ - ಕ್ರೀಡೆ (ಚೆಸ್) ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಆಯ್ಕೆ ಪ್ರಕ್ರಿಯೆ:
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದೆ. ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಸಮಾರಂಭದ ನಂತರ ಜಾಂಬವತಿ ಕಲ್ಯಾಣ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ.