ETV Bharat / city

ರಾಜ್ಯಸಭೆ ಎಲೆಕ್ಷನ್​​​ನಲ್ಲಿ ಬಿಜೆಪಿ ಸೋಲಿಸಲು ಜೆಡಿಎಸ್​, ಕಾಂಗ್ರೆಸ್​ ಒಂದಾಗಬೇಕು: ಹೆಚ್.ಡಿ.ರೇವಣ್ಣ

author img

By

Published : Jun 7, 2022, 9:11 PM IST

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಜೆಡಿಎಸ್​ ಬೆಂಬಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಮನವಿ ಮಾಡಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಂದಾಗಬೇಕಿದೆ ಎಂದಿದ್ದಾರೆ.

h-d-revanna
ಹೆಚ್.ಡಿ.ರೇವಣ್ಣ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಕೋಮುವಾದಿ ಪಕ್ಷವನ್ನು ದೂರ ಇಡುವುದಕ್ಕೆ ನಾವೆಲ್ಲ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರ ಇಡಬೇಕು. ಮೊದಲಿನಿಂದಲೂ ದೇವೇಗೌಡರದ್ದು ಅದೇ ಆಶಯವಾಗಿದೆ. ನಮ್ಮನ್ನು ಎ ಟೀಮ್, ಬಿ ಟೀಮ್ ಅಂದ್ರು. ಹಿಂದೆ ಸರ್ಕಾರ ರಚನೆಯಾಗಿದ್ದಾಗ, ಬಳಿಕ ನಡೆದ ಘಟನೆಗಳಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಮರೆಯಬೇಕು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಅದನ್ನ ಮರೆಯಬೇಕು ಎಂದು ಹೇಳಿದರು.

ನಾನು ವಿಮರ್ಶೆ ಮಾಡಲು ಹೋಗಲ್ಲ. ವಿಮರ್ಶೆ ಮಾಡುವ ಟೈಮ್ ಅಲ್ಲ. ಕಾಂಗ್ರೆಸ್​ನ ಎಲ್ಲ ನಾಯಕರು ಹಾಗೂ ಜೆಡಿಎಸ್​ನ ನಾಯಕರು ಎಲ್ಲರೂ ಸೇರಿ ಕೋಮುವಾದಿಗಳನ್ನು ದೂರ ಇಡಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರು ಕೆಳಗಿಳಿಯುವಾಗ ಬೆಂಬಲ ನೀಡಬಹುದಿತ್ತು. ಆದರೆ ನಾವು ಆಗ ಬೆಂಬಲ ನೀಡಲಿಲ್ಲ ಎಂದರು.

ಸಿದ್ದರಾಮಯ್ಯ ಜೊತೆ ಮಾತನಾಡುವೆ: ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಬಳಿ 32 ಮತಗಳಿವೆ. ದೇವೇಗೌಡರು ನಿಂತಾಗ 38 ಇತ್ತು. ಕಾಂಗ್ರೆಸ್ ಮುಖಂಡರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ರಾಷ್ಟ್ರೀಯ ಮುಖಂಡರ ಬಳಿಯೂ ಚರ್ಚೆ ಆಗಿದೆ. ಸಿದ್ದರಾಮಯ್ಯ ಅವರು ಕೋಪದಲ್ಲಿದ್ದಾರೆ. ಅವರ ಜೊತೆ ತಡವಾಗಿ ಮಾತನಾಡುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಗೆ ಮೊದಲು ಹೇಳಿದ್ರು. ಐದು ವರ್ಷ ನೀವೇ ಸಿಎಂ ಆಗಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ರು. ಆದರೆ, ನಾವು ಅದಕ್ಕೆ ಒಪ್ಪಲಿಲ್ಲ. ಕಾಂಗ್ರೆಸ್ ಜೊತೆ ಹೋದೆವು. 2018 ರ ಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಿಡಿಯಲಿಲ್ವಾ?. ಕೋಮುವಾದಿಗಳನ್ನು ದೂರ ಇಡುವುದಕ್ಕೆ ಸಹಕರಿಸಬೇಕಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆಯಬೇಕಿದೆ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರಿಗೂ ಮನವಿ ಮಾಡುತ್ತೇನೆ ಎಂದರು.

ನಮಗೆ ಅಧಿಕಾರದ ಆಸೆ ಇಲ್ಲ. ಆಸೆ ಇದ್ದಿದ್ದರೆ ಈ ಹಿಂದೆ ಮೈತ್ರಿ ಸಂದರ್ಭದಲ್ಲೇ ಸೋನಿಯಾಗಾಂಧಿ ಜೊತೆ ಮಾತನಾಡಿ ಮುಂದುವರಿಯುತ್ತಿದ್ದೆವು. ನಮಗೆ ಯಾವುದೇ ಭಯ ಇಲ್ಲ. ನಮ್ಮ ಎಲ್ಲ ಶಾಸಕರು ನಮ್ಮ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ನಿರುದ್ಯೋಗಕ್ಕೆ ಮದ್ದು ಅರೆಯದ ಕೇಂದ್ರ ಸರ್ಕಾರ.. ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.