ETV Bharat / city

ತುರ್ತು ಸಾಲದ ಆ್ಯಪ್​​​ಗಳಿಂದ ದೂರಪಯೋಗ: ಆರ್ಥಿಕ ನೆರವಿಗೆ ಬ್ಯಾಂಕ್​ಗಳೇ ಉತ್ತಮ

ಹಣದ ಅವಶ್ಯಕತೆ ಇದ್ದರೆ ಬ್ಯಾಂಕ್ ಅಥವಾ ನೋಂದಾಯಿತ ಎನ್​ಬಿಎಫ್​ಸಿಗಳನ್ನು ಸಂಪರ್ಕಿಸಿ. ಮೋಸದ ಮತ್ತು ಕಿರುಕುಳ ನೀಡುವ ಆ್ಯಪ್​​ಗಳ ಮೊರ ಹೋಗಬೇಡಿ ಎಂದು ಆರ್ಥಿಕ ತಜ್ಞ ನಿತ್ಯಾನಂದ ಎಚ್ಚರಿಸಿದರು.

fraud-by-emergency-loan-apps
ಸಾಲ
author img

By

Published : Dec 29, 2020, 7:37 PM IST

ಬೆಂಗಳೂರು: ಕೋವಿಡ್ -19 ದುಷ್ಪರಿಣಾಮ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆ್ಯಪ್​​​ಗಳ ಮೂಲಕ ತುರ್ತು ಸಾಲ ಪಡೆದವರಿಗೆ ದುಪ್ಪಟ್ಟು ಬಡ್ಡಿ ವಿಧಿಸಿ ಕಿರುಕುಳ ನೀಡುತ್ತಿರುವುದು ಕಂಡುಬರುತ್ತಿವೆ. ಅದಕ್ಕೆ ಜನರ ಅಸಹಾಯಕತೆಯೇ ಕಾರಣ ಎನ್ನಲಾಗಿದೆ. ಡಿ.23ರಂದು ನಗರದ ಸೈಬರ್ ಕ್ರೈಂ ವಿಭಾಗದ ಪೊಲೀಸರು 3 ಆ್ಯಪ್​​ಗಳ ವಿರುದ್ಧ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ...ಕೆಟ್ಟ ಸಾಲದಿಂದ ಬ್ಯಾಂಕ್​ಗಳಿಗೆ ಅಲ್ಪ ಮುಕ್ತಿ: ತುಸು ನಿಟ್ಟುಸಿರು ಬಿಟ್ಟ ಆರ್​ಬಿಐ!

ಕೆಲ ಆನ್​ಲೈನ್​ ಆ್ಯಪ್​​ಗಳು ಆರ್​​ಬಿಐ ನಿಯಮ ಉಲ್ಲಂಘಿಸಿ ಮುಂಗಡ ಸಾಲ ನೀಡುತ್ತಿವೆ. ಜೊತೆಗೆ ಮರು ಪಾವತಿ ಸಮಯದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಅನೇಕ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಂತಹ ಆ್ಯಪ್​​ಗಳು ಗ್ರಾಹಕರಿಗೆ ಕಿರುಕುಳ ನೀಡಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಆರ್ಥಿಕ ತಜ್ಞ ನಿತ್ಯಾನಂದ

ದೇಶದ ಬ್ಯಾಂಕ್ ವ್ಯವಸ್ಥೆ ಉತ್ತಮವಾಗಿದೆ. ಸಾಲ ಹಾಗೂ ಠೇವಣಿ ಸಂಬಂಧಿಸಿದ ವ್ಯವಹಾರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ನಂಬಿಕಾರ್ಹ. ಆರ್​ಬಿಐ ನಿಯಮಗಳ ಪರಿಮಿತಿಯಲ್ಲಿ ಕೆಲಸ ಮಾಡುವ ಬ್ಯಾಂಕ್​​ಗಳು ಮೋಸ ಮಾಡುವುದಿಲ್ಲ. ಬ್ಯಾಂಕ್​​ಗಳಲ್ಲಿ ಓವರ್ ಡ್ರಾಫ್ಟ್, ಸಣ್ಣ ಸಾಲದ ಸೌಲಭ್ಯ ನೀಡುತ್ತದೆ. ಹೀಗಾಗಿ, ಹಣದ ಅವಶ್ಯಕತೆ ಇದ್ದರೆ ಬ್ಯಾಂಕ್ ಅಥವಾ ನೋಂದಾಯಿತ ಎನ್​ಬಿಎಫ್​ಸಿಗೆ ಹೋಗಿ ಎಂದು ಆರ್ಥಿಕ ತಜ್ಞ ನಿತ್ಯಾನಂದ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.