ಬೆಂಗಳೂರು: 'ಕೆಎಸ್ಆರ್ಟಿಸಿ' ಹೆಸರು ಕೇರಳ ರಾಜ್ಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆ, ಕರ್ನಾಟಕ ರಾಜ್ಯ ಸಾರಿಗೆಯನ್ನ ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಂಪನಿ ಎಂದು ಮರು ನಾಮಕರಣ ಮಾಡುವಂತೆ ಮಾಜಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈಟಿವಿ ಭಾರತ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದರು.
ಓದಿ: ಕೇರಳ ಪಾಲಾದ 'ಕೆಎಸ್ಆರ್ಟಿಸಿ' ಟ್ರೇಡ್ ಮಾರ್ಕ್: ಕಾನೂನು ಹೋರಾಟ ಮುಂದುವರೆಸಲು ಕರ್ನಾಟಕದ ಒಲವು
ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಕಾಲಾವಧಿಯಲ್ಲಿ ರಾಜ್ಯ ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ ಎಂದು ಹೆಸರು ಇಡಲಾಗಿತ್ತು. ಆದರೆ, ಕೇರಳ ರಾಜ್ಯ ನಮ್ಮ ರಾಜ್ಯಕ್ಕಿಂತಲೂ ಮುಂಚೆ ಈ ಹೆಸರು ಇಟ್ಟಿದ್ದು, ಈ ಕಾರಣಕ್ಕೆ ಕೇರಳ ಪರವಾಗಿ ತೀರ್ಪು ನೀಡಲಾಗಿದೆ.
ಈ ವಿಚಾರವಾಗಿ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇಲ್ಲದಿದ್ದರೆ ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಂಪನಿ ಎಂದು ಮರು ನಾಮಕರಣ ಮಾಡಬಹುದು ಇದರಿಂದ ಯಾವುದೇ ಕಾನೂನು ಅಡಚಣೆ ಆಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಹಾಗೂ ಕೇರಳ ರಾಜ್ಯದ ಸಾರಿಗೆ ಇಲಾಖೆಗಳಿಗೆ ಕೆಎಸ್ಆರ್ಟಿಸಿ ಎಂದು ಒಂದೇ ಹೆಸರು ಇರುವ ಹಿನ್ನೆಲೆ, 1994 ರಲ್ಲಿ ಈ ವಿವಾದ ಸೃಷ್ಟಿಯಾಯಿತು. ನ್ಯಾಯಾಲಯ ತೀರ್ಪು ನೀಡಿದ ನಂತರ ಕೇರಳದ ಸಾರಿಗೆ ಇಲಾಖೆ, ಕರ್ನಾಟಕ ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿ ಮುಂದೆ 'ಕೆಎಸ್ಆರ್ಟಿಸಿ' ಹೆಸರು ಬಳಕೆ ಮಾಡಬಾರದು ಎಂದಿದೆ.