ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅರ್ಜುನನಿಗೆ ವೈರಿ ಕೊಲ್ಲುವ ಚಿಂತೆ. ಭೀಮನಿಗೆ ಅನ್ನದ ಚಿಂತೆ. ಯುಕ್ತಿ ಬಲ್ಲವನಿಗೆ ತತ್ವ ಹೇಳುವ ಚಿಂತೆ. ಬಿಜೆಪಿ ನಾಯಕರಿಗೆ ಹೆಣದ ಮೇಲೆ ರಾಜಕೀಯ ಮಾಡುವ ಚಿಂತೆ ಎಂದು ವ್ಯಂಗ್ಯವಾಡಿದ್ದಾರೆ.
"ಬಿಜೆಪಿ ಸರ್ಕಾರದ ಸಚಿವರೇ, ಬೆಂಗಳೂರಲ್ಲಿ ಕುಳಿತು ರಾಜಕೀಯ ಮಾಡುವುದು ಬಿಟ್ಟು ಪ್ರವಾಹ ಪೀಡಿತರ ನೆರವಿಗೆ ಧಾವಿಸಿ, ಪ್ರವಾಹದಿಂದ ಜನ ಸಾಯುತ್ತಿದ್ದಾರೆ. ನಿಮಗೆ ಗಲಭೆ ರಾಜಕೀಯವೇ ಮುಖ್ಯವಾಯಿತೆ? ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೇ ನಿಮ್ಮ ಆದ್ಯತೆಯಾಯಿತೆ?" ಎಂದು ಪ್ರಶ್ನಿಸಿದ್ದಾರೆ.