ETV Bharat / city

ಕಾಂಗ್ರೆಸ್​​ ಸೇರಲು ಮುಂದಾಗಿದ್ದರಂತೆ ದೊಡ್ಡಗೌಡರು: ಎಸ್​​ಎಂಕೆ ಆತ್ಮಕತೆಯಲ್ಲಿ ಉಲ್ಲೇಖ!

ಹಿರಿಯ ರಾಜಕೀಯ ಮುತ್ಸದ್ದಿಯೆಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆತ್ಮಕತೆ "ಸ್ಮೃತಿ ವಾಹಿನಿ"ಯಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ.

smk- HDD 1 Former cm SM krishna autobiography
ಕಾಂಗ್ರೆಸ್ ಸೇರಲು ಮುಂದಾಗಿದ್ದ ದೊಡ್ಡಗೌಡರು: ಎಸ್.ಎಂ.ಕೆ ಆತ್ಮಕತೆಯಲ್ಲಿ ಬಯಲು..!
author img

By

Published : Dec 25, 2019, 8:20 PM IST

ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿಯೆಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆತ್ಮಕತೆ "ಸ್ಮೃತಿ ವಾಹಿನಿ"ಯಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ.

2016ರಲ್ಲಿ ಬರೆದ ಜೀವನ ಚರಿತ್ರೆಯ ಪುಸ್ತಕ ಹೊಸ ವರ್ಷ ಜನವರಿ 4ರಂದು ಬಿಡುಗಡೆಯಾಗಲಿದೆ. ತಮ್ಮ ಸುದೀರ್ಘ ರಾಜಕೀಯದುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧವೇ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಒಂದು ಕಾಲದಲ್ಲಿ ಜನತಾ ಪರಿವಾರ ಪಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ತೊರೆದು ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರ ಜತೆಗೆ ರಾಜಕೀಯವಾಗಿ ಚರ್ಚೆಗೆ ಬರದ, ಇದುವರೆಗೂ ರಹಸ್ಯವಾಗಿದ್ದ ಹಲವಾರು ಆಸಕ್ತಿದಾಯಕ ಸಂಗತಿಗಳು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಎಸ್.ಎಂ.ಕೃಷ್ಣ ಅವರ ಆತ್ಮಕಥೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ವರನಟ ಡಾ. ರಾಜಕುಮಾರ್ ಅಪಹರಣ, ಅವರ ಬಿಡಯಗಡೆಗಾಗಿ ಸಿಎಂ ಆಗಿದ್ದಾಗ ನಡೆಸಿದ ಕಸರತ್ತು, ನರಹಂತಕ ವೀರಪ್ಪನ್ ಉಪಟಳಗಳು, ಕಾಂಗ್ರೆಸ್ ಪಕ್ಷದಲ್ಲಿನ ರಾಜಕಾರಣದ ಅನುಭವ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಕಾರಣಗಳು ಹೀಗೆ ಹಲವಾರು ಸಂದರ್ಭಗಳ ಬಗ್ಗೆ ಕುತೂಹಲಕಾರಿ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಲಾಗಿದೆ.

Intro:ದೇವೇಗೌಡರ " ಕಾಂಗ್ರೆಸ್ " ರಾಜಕಾರಣ : ಎಸ್ ಎಂ ಕೆ
ಆತ್ಮಕತೆಯಲ್ಲಿ ಬಯಲು..!

ಬೆಂಗಳೂರು :

ತಮ್ಮ ಸುದೀರ್ಘ ರಾಜಕೀಯದುದ್ದಕ್ಕೂ ಹಸ್ತದ ಚಿನ್ನೆಯ ಪಕ್ಷದ ವಿರುದ್ಧವೇ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಒಂದು ಕಾಲದಲ್ಲಿ ಜನತಾ ಪರಿವಾರದ ಪಕ್ಷವನ್ನು ಹಾಗು ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರಲು ಆ ಪಕ್ಷದ ನಾಯಕರ ಮನೆ ಬಾಗಿಲ ಕದ ತಟ್ಟಿದ್ದರು.

ಈ ಸಂಗತಿಯನ್ನು ನಾಡಿನ ಹಿರಿಯ ಮುತ್ಸದ್ದಿ ರಾಜಕಾರಣಿಯೆಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ತಮ್ಮ ಆತ್ಮಕತೆ " ಸ್ಮೃತಿ ವಾಹಿನಿ " ಯಲ್ಲಿ ಪ್ರಸ್ಥಾಪಿಸಿದ್ದಾರೆ‌. ಸೂಕ್ಷ್ಮವಾಗಿ ದೇವೇಗೌಡರ ರಾಜಕಾರಣದ ದ್ವಂದ್ವಗಳನ್ನು ಸಹ ಉಲ್ಲೇಖಿಸಿದ್ದಾರೆ.

ಮೂರು ವರ್ಷಗಳ ಹಿಂದೆ ೨೦೧೬ ರಲ್ಲಿ ಬರೆದ ಜೀವನ ಚರಿತ್ರೆಯ ಪುಸ್ತಕ ಹೊಸ ವರ್ಷ ಜನೆವರಿ ನಾಲ್ಕರಂದು ಬಿಡುಗಡೆಯಾಗಲಿದೆ.

ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರ ಜತೆಗೆ ರಾಜಕೀಯವಾಗಿ ಚರ್ಚೆಗೆ ಹಚ್ಚುವ, ಇದುವರೆಗೂ ರಹಸ್ಯವಾಗಿದ್ದ ಹಲವಾರು ಆಸಕ್ತಿದಾಯಕ ಸಂಗತಿಗಳು ಈ ಪುಸ್ತಕದಲ್ಲಿವೆ.

ಎಸ್ ಎಂ ಕೃಷ್ಣ ಅವರ ಆತ್ಮಕಥೆ ಸಾಕಷ್ಟು ಕುತೂಹಲ ಕೆರಳಿಸಿದ್ದು ವರನಟ ಡಾ ರಾಜಕುಮಾರ್ ಅಪಹರಣ, ಅವರ ಬಿಡಯಗಡೆಗಾಗಿ ಸಿಎಂ ಆಗಿದ್ದಾಗ ನಡೆಸಿದ ಕಸರತ್ತು. ನರಹಂತಕ ವೀರಪ್ಪನ್ ಉಪಟಳಗಳು...ಕಾಂಗ್ರೆಸ್ ಪಕ್ಷದಲ್ಲಿನ ರಾಜಕಾರಣದ ಅನುಭವ....ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಕಾರಣಗಳು....ಹೀಗೆ ಹಲವಾರು ಸಂದರ್ಭಗಳ ಬಗ್ಗೆ ಕುತೂಹಲಕಾರಿ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಲಾಗಿದೆ.

Body: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯದಲ್ಲಿ ದೇಬರಾಜ್ ಅರಸ್ ಅವರು ಮುಖ್ಯಮಂತ್ರಿ ಆಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಗೌಡರು ಆಗ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಕೈಗಾರಿಕೆ ಸಚಿವರಾಗಿದ್ದ ಎಸ್ ಎಂ ಕೃಷ್ಣ ಅವರನ್ನು ಭೇಟಿ ಖಾಸಗಿಯಾಗಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಸೇರುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಇದಕ್ಕೆ ವಾರ್ತಾ ಇಲಾಖೆ ನಿರ್ದೇಶಕರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ಸಾಕ್ಷಿಯಾಗಿದ್ದರು. ಎಂದು ಎಸ್ ಎಂ ಕೆ ಅವರ ಪುಸ್ತಕದಲ್ಲಿ ಬರೆಯಲಾಗಿದೆ.

ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ದೇವೇಗೌಡರಿಗೆ ...
ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸ್ ವಿರುದ್ಧ ಪ್ರತಿ ಪಕ್ಷ ನಾಯಕರಾಗಿದ್ದಾಗ ೧೮ ಗಂಭೀರ ಆರೋಪಗಳನ್ನು ಮಾಡಿದ್ದೀರಿ ಅವುಗಳನ್ನು ಸಾಬೀತುಪಡಿಸದಿದ್ದರೆ ರಾಜಕೀಯ ಸನ್ಯಾಸ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದೀರಿ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರೆ ಜನತೆ ದೃಷ್ಟಿಯಲ್ಲಿ ತಮ್ಮ ಘನತೆಗೆ ಕುಂದು ಬರಲಿದೆ. ಅದರ ಬದಲಿಗೆ ದೇವರಾಜು ಅರಸ್ ಅವರನ್ನು ಸಿಎಂ ಕುರ್ಚಿಯಿಂದ ಬದಲಾವಣೆ ಮಾಡಿದರೆ ಕಾಂಗ್ರೆಸ್ ಸೇರುತ್ತೇನೆ ಎನ್ನುವ ಷರತ್ತು ಹಾಕಿ ಕಾಂಗ್ರೆಸ್ ಸೇರುವುದು ಉತ್ತಮ ಎಂದು ಸಲಹೆ ನೀಡಿದ್ದರಂತೆ.

ಎಂಬತ್ತರ ದಶಕದಲ್ಲಿ ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ವಿಶ್ವಾಸ ಮತ ಸಾಬೀತುಪಡಿಸದೇ ರಾಜೀನಾಮೆ ನೀಡಿದ್ದಾಗ ಸಹ ದೆಹಲಿಯಲ್ಲಿ ಕಾಂಗ್ರೆಸ್ ಸೇರುವ ಸಂಬಂಧ ದೇವೇಗೌಡರು ಮತ್ತು ಹಿರಿಯ ಜನತಾ ಪರಿವಾರದ ಮುಖಂಡ ರಾಗಿದ್ದ ಎಸ್ ಆರ್ ಬೊಮ್ಮಾಯಿ ಅವರು ತಮ್ಮೊಡನೆ ಮತ್ತು ಹಿರಿಯ ಮುಖಂಡರಾಗಿದ್ದ ಪ್ರಣಬ್ ಮುಖರ್ಜಿ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಿದ್ದರು. ಕರ್ನಾಟಕದಲ್ಲಿ ತಮ್ಮ ಆಪ್ತರೊಂದಿಗೆ ಸಮಾಲೋಚಿಸಿ ತಿಳಿಸುವುದಾಗಿ ಹೇಳಿದ್ದರು.ನಂತರ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪುಸ್ತಕದಲ್ಲಿ ಪ್ರಸ್ಥಾಪಿಸಿದ್ದಾರೆ.

Conclusion: ದೇವೇಗೌಡರು ಹಾಗು ಹಿರಿಯಮುಖಂಡರಾದ ಮಾಜಿ ಸಿಎಂ ದಿ. ಎಸ್ ಆರ್ ಬೊಮ್ಮಾಯಿ ಅವರು ಸರಿಯಾಗಿ ಯೋಚಿಸಿ ನಿರ್ಧಾರ ತಗೆದುಕೊಂಡಿದ್ದರೆ ಮಾಜಿ ಸಿಎಂ ವೀರೇಂದ್ರ ಪಾಟೀಲರಂತೆ ಬಹು ಹಿಂದೆಯೇ ಕಾಂಗ್ರೆಸ್ ಪಕ್ಷವನ್ನು ಸೇರಬಹುದಿತ್ತು. ದೇವೇಗೌಡರು ಮತ್ತು ಬೊಮ್ಮಾಯಿ ಅವರು ಆಗಿನ ಕಾಲದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಸೇರುವ ಮನಸ್ಥಿತಿಯಲ್ಲಿದ್ದರೆನ್ನುವುದು ಸ್ಪಷ್ಟ. ಈ ಸಂಗತಿ ತಮಗೆ, ರಾಷ್ಟ್ರ ಪತಿಯಾಗಿದ್ದ ಪ್ರಣಬ್ ಮುಖರ್ಜಿ ಮತ್ತು ದೇವೇಗೌಡರಿಗೆ ಮಾತ್ರ ತಿಳಿದಿದೆ. ಎಂದು ಕೃಷ್ಣ ಅವರು ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.