ಬೆಂಗಳೂರು: ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ. ದೌರ್ಜನ್ಯ ಎಸಗಿದ ರೀಲರ್ಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
-
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ.1/3 pic.twitter.com/xqxKYqBXbr
— H D Kumaraswamy (@hd_kumaraswamy) January 15, 2022 " class="align-text-top noRightClick twitterSection" data="
">ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ.1/3 pic.twitter.com/xqxKYqBXbr
— H D Kumaraswamy (@hd_kumaraswamy) January 15, 2022ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ.1/3 pic.twitter.com/xqxKYqBXbr
— H D Kumaraswamy (@hd_kumaraswamy) January 15, 2022
ರೇಷ್ಮೆಗೂಡು ಹರಾಜು ನಡೆಯುವ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವಂತೆಯೂ ಸೂಚಿಸಿದ್ದೇನೆ. ಇಂಥ ಘಟನೆಗಳು ಮರುಕಳಿಸದಂತೆ ಬಿಗಿಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಹರಾಜು ಸಂದರ್ಭದಲ್ಲಿ ರೇಷ್ಮೆ ಗೂಡನ್ನು ಬೇರ್ಪಡಿಸುವುದು, ಅಕ್ರಮವಾಗಿ ಗೂಡನ್ನು ತೆಗೆದುಕೊಳ್ಳುವುದು, ಕಳ್ಳತನ ಮಾಡುವುದು ರಾಮನಗರ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. ಇಂಥ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಎಫ್ಐಆರ್ ದಾಖಲು:
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ದೌರ್ಜನ್ಯ ಎಸಗಿದ್ದ ರೀಲರ್ ವಿರುದ್ಧ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯಂತೆ ಕೇಸ್ ದಾಖಲಾಗಿದೆ.
ಜನವರಿ 13 ರಂದು ಹಾವೇರಿ ಮೂಲದ ವಿರೂಪಾಕ್ಷಪ್ಪ ಎಂಬುವರು ರಾಮನಗರ ಮಾರುಕಟ್ಟೆಗೆ ರೇಷ್ಮೆಗೂಡನ್ನು ತಂದಿದ್ದರು. ಹರಾಜಿನಲ್ಲಿ ರೇಷ್ಮೆ ಗೂಡು ಖರೀದಿಸಿದ್ದ ಮುನೀರ್ ಅಹ್ಮದ್ ಎಂಬ ರೀಲರ್ ರೈತನ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಹುಬ್ಬಳ್ಳಿ: ಮಾಸ್ಕ್ ಹಾಕದ ಯುವಕನನ್ನು ಕೊರಳಪಟ್ಟಿ ಹಿಡಿದು ಎಳೆದೊಯ್ದ ಪೊಲೀಸ್