ETV Bharat / city

ಅಲಯನ್ಸ್ ವಿವಿ ಮಾಜಿ ಕುಲಪತಿ ಮಧುಕರ್‌ ಅಂಗೂರ್​ಗೆ ಇಡಿ ಸಂಕಷ್ಟ - Madhukar Angoor to attend the ED hearing

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಿನ್ನೆಲೆ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಮಧುಕರ್‌ ಅಂಗೂರ್‌ ಅವರಿಗೆ ಇಡಿ ಸಮನ್ಸ್​ ನೀಡಿದ್ದು, ಈ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Madhukar Angoor
Madhukar Angoor
author img

By

Published : Mar 12, 2021, 11:05 AM IST

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಿನ್ನೆಲೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮಧುಕರ್‌ ಅಂಗೂರ್‌ ಅವರಿಗೆ ಜಾರಿ ‌ನಿರ್ದೇಶನಾಲಯ ನೋಟಿಸ್ ನೀಡಿದ್ದು, ಈ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಿನ್ನೆಲೆ ಸಮನ್ಸ್ ನೀಡಲಾಗಿದೆ. ಕಳೆದ ವರ್ಷ ಅ. 9 ರಂದು ನ್ಯಾಯಾಲಯ ಮಧುಕರ್‌ ಅಂಗೂರ್‌ ವಿಚಾರಣೆ ನಡೆಸಿತ್ತು. ಮನಿ ಲಾಂಡರಿಂಗ್‌ ಹಾಗೂ ಅಲಯನ್ಸ್ ವಿವಿಯ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸಿಕೊಂಡಿರುವ ಆರೋಪ ಇವರ ವಿರುದ್ಧ ಕೇಳಿ ಬಂದಿದ್ದು, ಅಮೆರಿಕ ಪೌರತ್ವ ಹೊಂದಿರುವ ಅಂಗೂರ್‌ ಸುಮಾರು 100 ಕೋಟಿ ರೂ. ಸಾರ್ವಜನಿಕ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಇನ್ನು ಮಧುಕರ್‌ ಅಂಗೂರ್‌ ಮತ್ತು ಸಹವರ್ತಿಗಳ ಬ್ಯಾಂಕ್‌ ಖಾತೆ ವಿವರ ಕಲೆ ಹಾಕಿರುವ ಶ್ರೀವಾರಿ ಏಜುಕೇಷನ್‌ ಸರ್ವೀಸಸ್‌ ಘಟಕ ಹಾಗೂ ಇತರ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಮಧುಕರ್‌ ಅಂಗೂರ್‌ ಪತ್ನಿ ಹಾಗೂ ಸಹವರ್ತಿಗಳನ್ನು ಹಲವು ಬಾರಿ ವಿಚಾರಣೆಗೆ‌ ಒಳಪಡಿಸಿದ್ದು, ಇಂದು ತನಿಖಾಧಿಕಾರಿಗಳ ಮುಂದೆ ಅಂಗೂರ್ ವಿಚಾರಣೆಗೆ ಹಾಜರಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.