ETV Bharat / city

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿಶೀಟರ್ ಮೇಲೆ‌ ಫೈರಿಂಗ್ - firing on rowdy sheeter in Bengaluru

ರೌಡಿಶೀಟರ್ ನರಸಿಂಹ ಎಂಬಾತನನ್ನು ಬಂಧಿಸಲು ಹೋದಾಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ರೌಡಿಶೀಟರ್ ಹಲ್ಲೆ ಮಾಡುತ್ತಿದ್ದಂತೆ ಗಿರಿನಗರ ಪೊಲೀಸ್ ಠಾಣೆ ಪಿಎಸ್​​ಐ ಸುನೀಲ್ ಗುಂಡು ಹಾರಿಸಿದ್ದಾರೆ.

ರೌಡಿಶೀಟರ್ ನರಸಿಂಹ ಹಾಗೂ   ಪಿಎಸ್​​ಐ ಸುನೀಲ್
ರೌಡಿಶೀಟರ್ ನರಸಿಂಹ ಹಾಗೂ ಪಿಎಸ್​​ಐ ಸುನೀಲ್
author img

By

Published : Jan 11, 2022, 11:00 AM IST

ಬೆಂಗಳೂರು: ರೌಡಿಶೀಟರ್​​ಗಳ ಉಪಟಳ ಹೆಚ್ಚಾಗಿರುವ ಬೆನ್ನಲ್ಲೇ ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಪಿಸ್ತೂಲ್ ಸದ್ದು ಮಾಡಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಗಿರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿಶೀಟರ್ ಮೇಲೆ‌ ಫೈರಿಂಗ್

ಗಿರಿನಗರ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್​​, ರೌಡಿಶೀಟರ್ ನರಸಿಂಹ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ರೌಡಿಶೀಟರ್​​ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧನ ವೇಳೆ ಕಾನ್ಸ್​​ಟೇಬಲ್ ಮೋಹನ್ ಎಂಬುವವರು ಹಲ್ಲೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

30 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿ:

ಕೊಲೆ, ದರೋಡೆ, ಕಿಡ್ನಾಪ್ ಹಾಗೂ ಮನೆಗಳ್ಳತನ ಹೀಗೆ 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದ ನರಸಿಂಹ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ‌ ರೌಡಿಶೀಟರ್ ಅಡಗಿಕೊಂಡಿರುವ ಮಾಹಿತಿ ಪಡೆದಿದ್ದ ಗಿರಿನಗರ ಪಿಎಸ್ಐ ಸುನೀಲ್‌ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಯ ಬಂಧನಕ್ಕೆ ತೆರಳಿದ್ದರು.

ರೌಡಿಶೀಟರ್ ನರಸಿಂಹ
ರೌಡಿಶೀಟರ್ ನರಸಿಂಹ

ಈ ವೇಳೆ ಕಾನ್ಸ್​​ಟೇಬಲ್ ಮೋಹನ್ ಎಂಬುವವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದ‌. ಅಲ್ಲದೇ ಪಿಎಸ್ಐ ಸುನೀಲ್ ಅವರ ಮೇಲೆ ಸಹ ಹಲ್ಲೆಗೆ ಯತ್ತಿಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮಾತು ಕೇಳದಿದ್ದಾಗ ಸರ್ವೀಸ್ ಪಿಸ್ತೂಲ್ ನಿಂದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಯಮನಂತೆ ಬಂದೆರಗಿದ ಟಿಪ್ಪರ್​.. ರಾಯಚೂರು ಮಹಿಳೆ ಸಾವು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.