ಬೆಂಗಳೂರು : ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬಿಬಿಎಂಪಿ ಯಲಹಂಕ ವಲಯದ ಚೀಫ್ ಇಂಜಿನಿಯರ್ ಕ್ಯಾಬಿನ್ನಲ್ಲಿ(ಬ್ಯಾಟರಾಯನಪುರ) ಎ.ಸಿ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು. ಎರಡನೇ ಫ್ಲೋರ್ನ ಮುಖ್ಯ ಇಂಜಿನಿಯರ್ ಕಚೇರಿಗೆ ಹೊಂದಿಕೊಂಡಂತಿರುವ ರೆಕಾರ್ಡ್ಸ್ ರೂಮ್ನಲ್ಲೂ ಸಹ ಬೆಂಕಿ ಕಾಣಿಸಿಕೊಂಡು, ದಾಖಲೆಗಳು ನಾಶವಾಗಿವೆ.
ಬೆಂಕಿ ಬಿದ್ದ ಕೂಡಲೇ ಯಲಹಂಕ ಮತ್ತು ಹೆಬ್ಬಾಳ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳ ಮೇಲೆ ತಿಂಗಳ ಹಿಂದೆ ಸರ್ಕಾರಿ ಸಂಸ್ಥೆಯಿಂದ ದಾಳಿಯಾಗಿತ್ತು.
ಅದೇ ಕಚೇರಿಯ ರೆಕಾರ್ಡ್ಸ್ ರೂಮ್ಗೆ ಇಂದು ಬೆಂಕಿ ಬಿದ್ದಿದೆ. ಇದು ಆಕಸ್ಮಿಕವಾಗಿ ಸಂಭವಿಸಿದ್ದೋ ಅಥವಾ ಉದ್ದೇಶಪೂರ್ವಕ ಬೆಂಕಿ ದಾಳಿಯೋ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಹೈಕೋರ್ಟ್ ಚಾಟಿ ಬಳಿಕ ಘನತ್ಯಾಜ್ಯ ತೆರವಿಗೆ ಮುಂದಾದ ಮಂಗಳೂರು ಮಹಾನಗರ ಪಾಲಿಕೆ
ಮಹತ್ವದ ದಾಖಲೆಗಳು ಅಗ್ನಿಗಾಹುತಿ? ಅಗ್ನಿ ಅವಘಡದಲ್ಲಿ ಕೆಲ ಮಹತ್ವದ ದಾಖಲೆ ಬೆಂಕಿಗಾಹುತಿಯಾಗಿವೆ. ಆದರೆ, ಅಧಿಕಾರಿಗಳು ಏನೂ ಅಗಿಲ್ಲ, ಆಕಸ್ಮಿಕ ಬೆಂಕಿ ಎಂದು ಹೇಳಿದ್ದಾರೆ. ಅಮೃತಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.