ETV Bharat / city

ಅನೈತಿಕ ಸಂಬಂಧ: ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಪತ್ನಿ ಕೊಲೆ ಮಾಡಿದ ಗಂಡ - ಬೆಂಗಳೂರಿನ ಆನೇಕಲ್​​ನಲ್ಲಿ ಡಬಲ್​ ಮರ್ಡರ್​

ಕಟ್ಟಿಕೊಂಡ ಹೆಂಡತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕಾಗಿ ಆಕ್ರೋಶಗೊಂಡಿರುವ ಪತಿಯೊಬ್ಬ ಹೆಂಡ್ತಿ ಹಾಗೂ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಆನೇಕಲ್​​ನಲ್ಲಿ ನಡೆದಿದೆ.

double murder in Anekal
double murder in Anekal
author img

By

Published : Dec 11, 2021, 10:00 PM IST

ಆನೇಕಲ್​(ಬೆಂಗಳೂರು. ಗ್ರಾಂ): ಅನೈತಿಕ ಸಂಬಂಧಕ್ಕಾಗಿ ಬೆಂಗಳೂರು ಗ್ರಾಮಾಂತರ ಆನೇಕಲ್​​ನಲ್ಲಿ ಜೋಡಿ ಕೊಲೆ ನಡೆದಿದೆ. ತಾಲೂಕಿನ ಚಂದಾಪುರದಲ್ಲಿ ಪ್ರಕರಣ ನಡೆದಿದ್ದು, ಪಕ್ಷವೊಂದರ ಮುಖಂಡ ಚಿಕ್ಕಹಾಗಡೆ ನಾರಾಯಣಸ್ವಾಮಿ ತನ್ನ ಪ್ರೇಯಸಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದ ವೇಳೆ ಕೊಲೆ ಮಾಡಲಾಗಿದೆ.

ಬೆಂಗಳೂರಿನ ಆನೇಕಲ್​​ನಲ್ಲಿ ಡಬಲ್​ ಮರ್ಡರ್​

ಇಬ್ಬರು ಮನೆಯಲ್ಲಿದ್ದ ಸಂದರ್ಭದಲ್ಲಿ ಪ್ರೇಯಸಿಯ ಗಂಡ ಇಬ್ಬರನ್ನು ಕೊಚ್ಚಿ ಕೊಲೆಗೈದು, ಸ್ಥಳದಿಂದ ಪರಾರಿಯಾಗಿದ್ದಾನೆ. ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಭಾ ಎದುರಿನ ರಸ್ತೆಯ ಪಕ್ಕದಲ್ಲಿ ಶೀಟ್​ ಮನೆಯಲ್ಲಿ ಇಬ್ಬರು ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಏನಾಯ್ತು 'ಧಡಕ್'​ ಚಿತ್ರದ ಬೆಡಗಿ ಜಾನ್ವಿ ಕಪೂರ್​​ಗೆ?

ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾರಾಯಣಸ್ವಾಮಿಗೆ ಕೊಲೆಯ ಸುಳಿವು ಸಿಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಈ ವೇಳೆ ಬಾಗಿಲ ಹತ್ತಿರ ಆತನ ಕೊಲೆ ಮಾಡಲಾಗಿದ್ದು, ಒಳಗಡೆ ಆತನ ಪ್ರೇಯಸಿ ಕಾವ್ಯಳನ್ನ ಹತ್ಯೆ ಮಾಡಲಾಗಿದೆ. ಅಕ್ರಮ ಸಂಬಂಧಕ್ಕಾಗಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿ ಗಣೇಶ್​, ಡಿವೈಎಸ್ಪಿ ಎಂ ಮಲ್ಲೇಶ್​​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.