ETV Bharat / city

ಉತ್ತರ ಪತ್ರಿಕೆ ಮೌಲ್ಯಮಾಪನ:  ಉಪನ್ಯಾಸಕರಿಗೆ ಎದುರಾಯ್ತು ಕೊರೊನಾ ಸವಾಲು...! - ಪಿಯು ಇಲಾಖೆ

ಈಗಾಗಲೇ ಪರೀಕ್ಷೆಗಳ ದಿನಾಂಕ ನಿಗದಿಯಾಗಿದೆ. ಕೆಲವು ಪರೀಕ್ಷೆಗಳು ಸಹ ನಡೆದಿದ್ದು, ಮೌಲ್ಯಮಾಪನ ಕಾರ್ಯವೂ ಕೂಡಾ ಮುಂದುವರಿದಿದೆ. ಮೌಲ್ಯಮಾಪನ ಮಾಡುವ ಉಪನ್ಯಾಸಕರೂ ಕೂಡಾ ಕೊರೊನಾ ಭೀತಿಯಲ್ಲೇ ಮೌಲ್ಯಮಾಪನ ಮಾಡಬೇಕಿದೆ.

pu board
ಪಿಯು ಇಲಾಖೆ
author img

By

Published : Jun 1, 2020, 11:56 AM IST

ಬೆಂಗಳೂರು: ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಂತಾಗಿದೆ ಮೌಲ್ಯಮಾಪನ ಮಾಡುವ ಉಪನ್ಯಾಸಕರ ಸ್ಥಿತಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿರುವವರು ಕೊರೊನಾ ಸವಾಲು ಎದುರಿಸುವ ಅನಿವಾರ್ಯತೆಯನ್ನೂ ನಿಭಾಯಿಸಬೇಕಿದೆ.

ಪಾಠ ಮಾಡುವ ಉಪನ್ಯಾಸಕರು ಇಂದು ಅಕ್ಷರಶಃ ಕೊರೊನಾ ಸವಾಲು ಎದುರಿಸುವ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೌಲ್ಯಮಾಪನ ಮಾಡುವವರಿಗೆ ಇರುವ ಮಾರ್ಗಸೂಚಿ ಮೌಲ್ಯಮಾಪಕರನ್ನು ಮತ್ತಷ್ಟು ಹೈರಾಣಾಗಿಸಿದೆ.

ಪಿಯು ಇಲಾಖೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದ್ದು, ಭಾನುವಾರವೂ ಸೇರಿದಂತೆ ನಿತ್ಯ ಬೆಳಗ್ಗೆ 8-30 ರಿಂದ ಸಂಜೆ 4 ಗಂಟೆಯವರೆಗೆ ನಡೆಯುತ್ತಿದೆ. ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್​​ನಿಂದ ಕೈಗಳನ್ನು ಶುದ್ಧೀಕರಿಸುವ ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.

ಬರೀ ಇಷ್ಟಾಗಿದ್ದರೆ ಅದು ಅಂತಹ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಮಾಸ್ಕ್ ಧರಿಸಿ ಹೆಚ್ಚು ಕಡಿಮೆ 7 ಗಂಟೆಗಳ ಕಾಲ ಅವಿರತವಾಗಿ ಮೌಲ್ಯಮಾಪನ ಮಾಡುವುದು ಬಹುದೊಡ್ಡ ಸವಾಲಾಗಿದೆ. ಇಷ್ಟೊಂದು ಸುದೀರ್ಘ ಸಮಯದವರೆಗೆ ಮಾಸ್ಕ್ ಹಾಕಿಕೊಂಡಿರುವುದು ಕಷ್ಟಸಾಧ್ಯ. ಅದೂ ಕೂಡ ಪಾಠ ಮಾಡುವ ವೃತ್ತಿಯವರಿಗೆ ಮತ್ತಷ್ಟು ಕಷ್ಟ‌.

ಪ್ರತಿ ಕೊಠಡಿಯಲ್ಲಿ ಆರು ಜನರನ್ನೊಳಗೊಂಡ ನಾಲ್ಕರಿಂದ ಐದು ತಂಡಕ್ಕೆ ಮೌಲ್ಯಮಾಪನ ಮಾಡಲು ಸ್ಥಳಾವಕಾಶ ಮಾಡಲಾಗಿದೆ. 24 - 30 ಜನರು ಪ್ರತಿ ಕೊಠಡಿಯಲ್ಲಿ ಇರಲಿದ್ದು, ಮೌಲ್ಯಮಾಪನ ಮಾಡುವವರು ಮಾಸ್ಕ್ ತೆಗೆದು ಕೆಲಸ ಮಾಡಲು ಸಾಧ್ಯವಿಲ್ಲ, ಒಂದೇ ಸ್ಥಳದಲ್ಲಿ ನಿರಂತರವಾಗಿ ಆರರಿಂದ ಎಂಟು ಗಂಟೆ ಜನರು ಇದ್ದಲ್ಲಿ ಅದರಲ್ಲಿ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ, ವೈರಾಣು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮಾಸ್ಕ್ ಧರಿಸಿಯೇ ಅಷ್ಟೊಂದು ಸುದೀರ್ಘ ಸಮಯ ಇರಲೇಬೇಕಾದ ಅನಿವಾರ್ಯ ಎದುರಾಗಿದೆ.

ಮಾಸ್ಕ್ ಧರಿಸಿದಾಗ ಸಹಜವಾದ ಉಸಿರಾಟ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಮೌಲ್ಯಮಾಪನ ಕೇಂದ್ರದಲ್ಲಿ ಉಪನ್ಯಾಸಕರು ಆರೋಗ್ಯ ಸಮಸ್ಯೆ ಎದುರಿಸುವ ಭೀತಿಗೆ ಸಿಲುಕಿದ್ದಾರೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಕಾಫಿ, ಟೀ ನೀಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಊಟ, ತಿಂಡಿ, ನೀರಿನ ವ್ಯವಸ್ಥೆ ಕೂಡ ಉಪನ್ಯಾಸಕರೇ ಮಾಡಿಕೊಳ್ಳಬೇಕು. ಈ ಯಾವ ವ್ಯವಸ್ಥೆ ಕೂಡ ಮೌಲ್ಯಮಾಪನ ಕೇಂದ್ರದಲ್ಲಿ ಈ ಬಾರಿ ಕಲ್ಪಿಸಿಲ್ಲ.

ಈ ಬಾರಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಕಂಪ್ಯೂಟರ್​​ನಲ್ಲಿ ದಾಖಲಿಸುವ ಜವಾಬ್ದಾರಿ ಕೂಡ ಉಪನ್ಯಾಸಕರಿಗೆ ನೀಡಲಾಗಿದೆ. ಇಷ್ಟು ವರ್ಷ ಓಎಂಆರ್ ಶೀಟ್ ನಲ್ಲಿ ಮಾತ್ರ ಅಂಕಗಳನ್ನು ಉಪನ್ಯಾಸಕರು ತುಂಬಿದರೆ, ಮೇಲಧಿಕಾರಿಗಳು ಅದನ್ನು ಕಂಪ್ಯೂಟರ್​​ನಲ್ಲಿ ದಾಖಲಿಸುತ್ತಿದ್ದರು. ಇದು ಸಾಕಷ್ಟು ವಿಳಂಬ ಪ್ರಕ್ರಿಯೆಯಾಗಿತ್ತು. ಆದರೆ, ಕಳೆದ ಬಾರಿ ಒಂದು ವಿಷಯವನ್ನು ಪ್ರಾಯೋಗಿಕವಾಗಿ ಉಪನ್ಯಾಸಕರ ಮೂಲಕವೇ ಕಂಪ್ಯೂಟರ್​​​ಗೆ ಅಂಕಗಳನ್ನು ದಾಖಲಿಸುವ ಪ್ರಯೋಗ ನಡೆಸಿದ್ದ ಶಿಕ್ಷಣ ಇಲಾಖೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದಿದೆ.

ಖಾಸಗಿ ಕಾಲೇಜು ಉಪನ್ಯಾಸಕರ ಮೇಲೆ ಒತ್ತಡ

ಮೌಲ್ಯಮಾಪನ ಕಾರ್ಯ ಆರಂಭಗೊಂಡು ನಾಲ್ಕೈದು ದಿನ ಕಳೆದರೂ ಕೊರೊನಾ ಭೀತಿಯಿಂದ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಮೌಲ್ಯಮಾಪಕರು ನಿರೀಕ್ಷಿತ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತಿಲ್ಲ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರಿ ಖಾಸಗಿ ಕಾಲೇಜು ಉಪನ್ಯಾಸಕರನ್ನು ಕಡ್ಡಾಯ ರೀತಿಯಲ್ಲಿ ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಷ್ಟೇ ಒತ್ತಡವನ್ನು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಮೇಲೆ ಶಿಕ್ಷಣ ಇಲಾಖೆ ಹಾಕುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.