ಬೆಂಗಳೂರು : ಪೊಲೀಸರು ಕೊರೊನಾ ಸೋಂಕಿಗೆ ಗುರಿಯಾಗುತ್ತಿರುವ ಹಿನ್ನೆಲೆ ಅವರ ಇಮ್ಯುನಿಟಿ ಪವರ್ ಜಾಸ್ತಿ ಮಾಡಿ ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಬೀಯಿಂಗ್ ಯು ಹ್ಯಾಪಿ ಹೆನ್ಸ್ (Being you happy hens) ಸಂಸ್ಥೆಯ ಸಹಯೋಗದಿಂದ ಕೊರೊನಾ ಸೋಂಕಿತ ಹಾಗೂ ಕ್ವಾರಂಟೈನ್ನಲ್ಲಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದ್ದು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಪಿ ಈಶಾ ಪಂತ್, ಪೊಲೀಸರಲ್ಲಿಯೂ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬರುತ್ತಿರುವ ಕಾರಣ, ಇಮ್ಯುನಿಟಿ, ಪ್ರೋಟೀನ್ ಜಾಸ್ತಿಯಾಗಲು ರೇಷನ್ ಕಿಟ್, ಪ್ರೋಟೀನ್ ಪೌಡರ್ ಹಾಗೂ ಮೊಟ್ಟೆ ನೀಡುತ್ತಿದ್ದೇವೆ ಎಂದು ತಿಳಿಸಿದರು.