ETV Bharat / city

ಉಪಚುನಾವಣೆಗೆ ಸಕಲ ಸಿದ್ಧತೆ: ಬಿ.ಹೆಚ್. ಅನಿಲ್ ಕುಮಾರ್ - ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ, ಕೆ.ಆರ್.ಪುರಂನ ಮಸ್ಟರಿಂಗ್ ಸೆಂಟರ್

ನಾಳೆ ನಡೆಯಲಿರುವ ಉಪಚುನಾವಣೆಗೆ ಮಹಾನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

kn_bng_04_election_preparation_7202707
ನಾಳೆಯ ಉಪಚುನಾವಣೆಗೆ ಸಕಲ ಸಿದ್ಧತೆ: ಚುನಾವಣಾ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್
author img

By

Published : Dec 4, 2019, 7:51 PM IST

ಬೆಂಗಳೂರು: ನಾಳೆ ನಡೆಯಲಿರುವ ಉಪಚುನಾವಣೆಗೆ ಮಹಾನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಚುನಾವಣಾ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ನಾಳೆಯ ಉಪಚುನಾವಣೆಗೆ ಸಕಲ ಸಿದ್ಧತೆ: ಚುನಾವಣಾ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್

ನಾಳೆ ಬೆಳಗ್ಗೆ 7 ಗಂಟೆ ಯಿಂದ ಮತದಾನ ಪ್ರಕ್ರಿಯೆ ನಡೆಯುವ ಹಿನ್ನೆಲೆ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ, ಕೆ.ಆರ್.ಪುರಂನ ಮಸ್ಟರಿಂಗ್ ಸೆಂಟರ್ ಗೆ ಚುನಾವಣಾ ಸಿಬ್ಬಂದಿ ಇಂದೇ ಹಾಜರಾಗಿದ್ದಾರೆ. ತಮ್ಮ ಕರ್ತವ್ಯಕ್ಕೆ ನೋಂದಣಿ ಮಾಡಿಕೊಂಡ ಚುನಾವಣಾ ಸಿಬ್ಬಂದಿ, ಮಸ್ಟರಿಂಗ್ ಸೆಂಟರ್ ನಿಂದ ಹೊರ ಹೋಗುವಂತಿಲ್ಲ. ಅಲ್ಲದೇ ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಬೇಕು. ನಾಳೆ ಚುನಾವಣೆ ಮುಗಿದ ಬಳಿಕ ವಾಪಸ್​ ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಲುಪಿಸಿ, ಕರ್ತವ್ಯದಿಂದ ಹೋಗಬಹುದಾಗಿದೆ ಎಂದರು.

ಸಿಬ್ಬಂದಿ ಬೂತ್ ಗಳಿಗೆ ತೆರಳಲು ಬಸ್, ಮಿನಿ ಬಸ್, ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ. ಇವಿಎಂ ತೆಗೆದುಕೊಂಡು ಹೋಗಲು ಒಟ್ಟು 61 ವಾಹನಗಳ ವ್ಯವಸ್ಥೆ ಮಾಡಿದ್ದು ಇವಿಎಂ ಜೊತೆ ತೆರಳಲು ಪೊಲೀಸ್ ಸಿಬ್ಬಂದಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ನಡೆಸುತ್ತೇವೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದರು.

Intro:ನಾಳೆ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆ- ಮಹಾಲಕ್ಷ್ಮಿ ಲೇಔಟ್ ನ ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ಬೆಂಗಳೂರು: ನಾಳೆ ನಡೆಯಲಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಕಲ ಸಿದ್ಧತೆ ನಡೀತಿದೆ.
ನಾಳೆ ಬೆಳಗ್ಗೆ 7 ಗಂಟೆ ರಿಂದ ಮತದಾನ ಪ್ರಕ್ರಿಯೆ ನಡೆಯುವ ಹಿನ್ನೆಲೆ, ಮಹಾಲಕ್ಷ್ಮಿ ಲೇಔಟ್ ನ ಮಸ್ಟರಿಂಗ್ ಸೆಂಟರ್ ಗೆ ಚುನಾವಣಾ ಸಿಬ್ಬಂದಿಗಳು ಇಂದೇ ಬಂದು ಹಾಜರಾದರು. ತಮ್ಮ ಕರ್ತವ್ಯಕ್ಕೆ ನೋಂದಣಿ ಮಾಡಿಕೊಂಡ ಚುನಾವಣಾ ಸಿಬ್ಬಂದಿ, ಮಸ್ಟರಿಂಗ್ ಸೆಂಟರ್ ನಿಂದ ಹೊರಹೋಗುವಂತಿಲ್ಲ. ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಬೇಕು.ನಾಳೆ ಚುನಾವಣೆ ಮುಗಿದ ಬಳಿಕ ವಾಪಾಸು ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಲುಪಿಸಿ, ಕರ್ತವ್ಯದಿಂದ ಹೋಗಬಹುದಾಗಿದೆ.
ಈಗಾಗಲೇ ಮತಗಟ್ಟೆ ಸಂಖ್ಯೆಯನ್ನೂ ಹಂಚಿಕೆ ಮಾಡಲಾಗಿದೆ. ಒಟ್ಟು 270 ಮತಗಟ್ಟೆಗಳು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿದೆ. ಸಿಬ್ಬಂದಿ ಬೂತ್ ಗಳಿಗೆ ತೆರಳಲು ಬಸ್, ಮಿನಿ ಬಸ್, ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ.
ಇವಿಎಂ ತೆಗೆದುಕೊಂಡು ಹೋಗಲು ಒಟ್ಟು 61 ವಾಹನಗಳ ವ್ಯವಸ್ಥೆ ಮಾಡಿದ್ದು ಇವಿಎಂ ಜೊತೆ ತೆರಳಲು ಪೊಲೀಸ್ ಸಿಬ್ಬಂದಿ ವ್ಯವಸ್ಥೆಯೂ ಮಾಡಲಾಗಿದೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 2,85,869
ಪುರುಷ ಮತದಾರರು - 1,47,365
ಮಹಿಳಾ ಮತದಾರರು - 1,38,474
ಇತರೆ ಮತದಾರರು - 42
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಒಟ್ಟು ಮತಗಟ್ಟೆ ಸಂಖ್ಯೆ - 270
ಸೂಕ್ಷ್ಮ ಮತಗಟ್ಟೆಗಳು ಒಟ್ಟು - 74
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು - 12
ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ
ಕಾಂಗ್ರೆಸ್ ಅಭ್ಯರ್ಥಿ ಎಂ ಶಿವರಾಜ್
ಜೆಡಿಎಸ್ ಅಭ್ಯರ್ಥಿ ಡಾ. ಗಿರೀಶ್ ಕೆ ನಾಶಿ

ಮಹಾಲಕ್ಷ್ಮಿ ಲೇಔಟ್ ನ ಸ್ಟ್ರಾಂಗ್ ರೂಂ ರಾಜಾಜಿನಗರದ ವಿದ್ಯಾವರ್ಧಕ ಸಂಘ ಹೈಸ್ಕೂಲ್
ಮಹಾಲಕ್ಷ್ಮಿ ಲೇಔಟ್ ನ ಮತ ಎಣಿಕೆ ಕೇಂದ್ರ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ ಮಲ್ಯ ರಸ್ತೆಯಲ್ಲಿ ನಡೆಯಲಿದೆ.

ಬೆಂಗಳೂರು ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುತ್ತೇವೆ. ಮತದಾರ ಸಿಬ್ಬಂದಿಗಳಿಂದ ಮಸ್ಟರಿಂಗ್ ಮಾಡಲಾಗುವುದು. ನಾಳೆ ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೂ ಚುನಾವಣೆ ನಡೆಯಲಿದೆ. ಮೂರು ಕಡೆ ಕೌಂಟಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಬ್ಸರ್ವರ್, ಮೈಕ್ರೋ ಅಬ್ಸರ್ವರ್ ಇರ್ತಾರೆ. ನಮ್ಮ ಪೊಲೀಸ್ ಸಿಬ್ಬಂದಿಗಳ ಕೊರತೆಯಾದ್ರೆ ಪ್ಯಾರಾ ಮಿಲಿಟರಿ ಫೋರ್ಸ್ ಬಳಕೆ ಮಾಡಲಾಗ್ತಿತ್ತು.
ಆದ್ರೆ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು ಪೊಲೀಸ್ ಭದ್ರತೆಯೇ ಸಾಕು. ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ನಡೆಸುತ್ತೇವೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.

ಸೌಮ್ಯಶ್ರೀ

kn_bng_04_election_preparation_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.