ETV Bharat / city

ಬಿಬಿಎಂಪಿ ಚುನಾವಣೆ: ಮತದಾರರ ಹೆಸರು ಎರಡೆರಡು ಕಡೆ ಬಾರದಂತೆ ಪಟ್ಟಿ ಸಿದ್ಧಪಡಿಸಲು ಆಯೋಗ ಸಭೆ

author img

By

Published : Aug 25, 2020, 7:26 PM IST

ಬಿಬಿಎಂಪಿ ಚುನಾವಣೆ ಸಂಬಂಧ, ಚುನಾವಣಾ ಪೂರ್ವ ಸಿದ್ಧತೆ ಹಾಗೂ ಮತದಾರರ ಪಟ್ಟಿ ತಯಾರಿ ಕುರಿತಾಗಿ ಇಂದು ರಾಜ್ಯ ಚುನಾವಣಾ ಆಯೋಗದ ಸಭೆ ನಡೆಯಿತು. ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಯೋಗದ ಆಯುಕ್ತರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

Election commission meeting
ಬಿಬಿಎಂಪಿ ಚುನಾವಣೆ

ಬೆಂಗಳೂರು: ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆ ನಡೆಸಲು, ಮತದಾರರ ಪಟ್ಟಿ ಹಾಗೂ ಪೂರ್ವ ಸಿದ್ಧತೆ ಕುರಿತು ರಾಜ್ಯ ಚುನಾವಣಾ ಆಯೋಗದ ಸಭೆ ನಡೆಯಿತು.

ರಾಜ್ಯ ಚುನಾವಣೆ ಆಯೋಗದ ಆಯುಕ್ತರು, ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳು, ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಮತದಾರರ ಪಟ್ಟಿ ಸಿದ್ಧಪಡಿಸುವಾಗ ಹೊಸದಾಗಿ ವಾರ್ಡ್ ಪುನರ್​ವಿಂಗಡಣೆಗೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಬೇಕು. ಈಗಾಗಲೇ ಈ ಬಗ್ಗೆ ಸಿಬ್ಬಂದಿಗೆ ಅಗಸ್ಟ್​ 21 ರಂದು ತರಬೇತಿ ನೀಡಲಾಗಿದೆ. ವಾರ್ಡ್ ವಿಂಗಡಣೆಯಂತೆ ಪ್ರತಿ ವಾರ್ಡಿನ ಗಡಿ ಸರಹದ್ದಿನಲ್ಲಿರುವ ಮತದಾರರನ್ನು ಗುರುತಿಸಿ, ಯಾವುದೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ವಾರ್ಡಿನ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಆಯಾ ವಾರ್ಡಿನ ಮತದಾರರು ಆಯಾ ವಾರ್ಡಿನಲ್ಲೇ ಇರುವಂತೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಹಾಗೂ ಆಯೋಗ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಯೋಗದ ಆಯುಕ್ತರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

Election commission meeting
ಚುನಾವಣಾ ಆಯೋಗದ ಸಭೆ

ಕಳೆದ ಜೂನ್​ 23ರಂದು ಬಿಬಿಎಂಪಿಯ ವಾರ್ಡ್​ಗಳ ಪುನರ್​​ವಿಂಗಡಣೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರಕಾರವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಆಯೋಗ ಆಗಸ್ಟ್​ 12 ರಂದು ಸೂಚನೆ ನೀಡಿತ್ತು.

Election commission meeting
ಪತ್ರಿಕಾ ಪ್ರಕಟಣೆ

ಇನ್ನೊಂದೆಡೆ ನಾಳೆಯಿಂದ ನವೆಂಬರ್​ 14ರವರೆಗೂ ಬಿಎಲ್​ಒ ಹಾಗೂ ಬಿಎಲ್​ಒ ಮೇಲ್ವಿಚಾರಕರು ಮನೆ ಮನೆಗೂ ಭೇಟಿ ನೀಡಿ, ಮತದಾರರ ಮಾಹಿತಿ ಕಲೆಹಾಕಲಿದ್ದಾರೆ. ಈ ವೇಳೆ ಯಾವ ವಾರ್ಡ್ ವ್ಯಾಪ್ತಿಗೆ ಹೆಸರು ಸೇರಬೇಕೆಂದು ಸ್ಪಷ್ಟಪಡಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.